LatestWeatherಕ್ರೀಡೆ-Sportsಬೆಂಗಳೂರು-Bengaluruರಾಜ್ಯ-Karnataka

ಅರ್​ಸಿಬಿ ಅಭಿಮಾನಿಗಳಿಗೆ ಗುಡ್​ ನ್ಯೂಸ್​! ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ

ಬೆಂಗಳೂರು: ನಾಳೆ ರಾಯಲ್​ ಚಾಲೆಂರ್ಸ್ ಬೆಂಗಳೂರು (Royal Challengers Bengaluru) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ (Chennai Super Kings) ನಡುವೆ ಪಂದ್ಯ ನಡೆಯಲಿದ್ದು, ಆರ್‌ಸಿಬಿ ಹೋಂ ಗ್ರೌಂಡ್‌ನಲ್ಲಿ ಜೆದ್ದಾಜಿದ್ದಿಗೆ ರೇಡಿಯಾಗಿದ್ದಾರೆ. ಆದರೆ ನಾಳೆ ಮಳೆಯಾಗುವ (Rain) ಸಾಧ್ಯತೆ ಇದ್ದು, ಪಂದ್ಯಕ್ಕೆ ಅಡ್ಡಿಯಾಗುತ್ತಾ ಎಂಬ ಅನುಮಾನ ಕಾಡುತ್ತಿದ್ದು, ಇದೀಗ ಹವಮಾನ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ.

ನಮ್ಮ ಕರ್ನಾಟಕ ಹವಾಮಾನ ಎಂಬ ಹೆಸರಿನ ಎಕ್ಸ್​ ಖಾತೆ ಮಳೆಯ ಮನ್ಸೂಚನೆ ಬಗ್ಗೆ ಟ್ವೀಟ್​ ಮಾಡಿದೆ. ಅದರಲ್ಲಿ ಸದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾಗಶಃ ಮೋಡ ಕವಿದಿದೆ. ಪಶ್ಚಿಮದಲ್ಲಿ ಸೂರ್ಯ ಬೆಳಗುತ್ತಿದೆ. ಶನಿವಾರ ಸಂಜೆ ಮತ್ತು ರಾತ್ರಿ ತುಂತುರು ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

ಸದ್ಯ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಇಂದು ಬೆಳಗ್ಗೆ ಕೂಡ ಮಳೆ ಬಂದಿದ್ದು, ಇನ್ನು ರಾಜ್ಯದಲ್ಲಿ 5 ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಪ್ರಾಮಾಣಿಕವಾಗಿ ಈಗ ಮಳೆಯ ನಿಖರವಾದ ಸಮಯವನ್ನು ಮುನ್ಸೂಚಿಸುವುದು ತುಂಬಾ ಕಠಿಣವಾಗಿದೆ. ಆದರೆ ಮಧ್ಯಾಹ್ನ-ಸಂಜೆಯಲ್ಲಿ ಮಾತ್ರ ನಮಗೆ ಮಳೆ ಬರುವ ಬಗ್ಗೆ ಅಂದಾಜು ಹಾಕಬಹುದಾಗಿದೆ ಎಂದು ಹೇಳಿದೆ.

https://youtu.be/dowiMBv6QX0?si=kEiPSvh4Lt3JbOVS

ಆದರೆ ನಾಳಿನ ಪಂದ್ಯಕ್ಕೆ ಮಳೆ ಬರುವ ಸಾಧ್ಯತೆ ಬಹಳ ಕಡಿಮೆ ಇದೆ. ಅಭಿಮಾನಿಗಳಂತೂ ನಾಳೆ ನಡೆಯುವ ಪಂದ್ಯವನ್ನು ಕಾಣುವ ತವಕದಲ್ಲಿದ್ದಾರೆ. ಕಾದು ಕುಳಿತ್ತಿದ್ದಾರೆ. ಆರ್‌ಸಿಬಿ ಪ್ಲೇಆಪ್‌ಗೆ ಹೋಗಲ್ಲಿದಿಯಾ ಎಂಬುದನ್ನು ಕಾದು ನೋಡಬೇಕಿದೆ.

Share with Friends
author avatar
News Desk