Latestರಾಷ್ಟ್ರೀಯ-National

ಏರ್ ಇಂಡಿಯಾದ 300 ಉದ್ಯೋಗಿಗಳ ಮೊಬೈಲ್ ಸ್ವಿಚ್ ಆಫ್; ಗಗನಸಖಿಯರು ಸೇರಿ 30 ಮಂದಿ ಲೇ ಆಫ್

ನವದೆಹಲಿ: ಏರ್ ಇಂಡಿಯಾ ಎಕ್ಸ್‌ಪ್ರೇಸ್‌ (AIR India) ಸಂಸ್ಥೆಯ ವಿವಿಧ ವಿಮಾನಗಳ (Aeroplane) ಗಗನಸಖಿಯರು ಸೇರಿದಂತೆ 30 ಮಂದಿ ಕ್ಯಾಬಿನ್ (Cabin Crew) ಸಿಬ್ಬಂದಿಯನ್ನು ಕೆಲಸದಿಂದ (Layoff) ತೆಗೆದುಹಾಕಲಾಗಿದೆ.

ಇನ್ನೂ ಬಹಳಷ್ಟು ಜನರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ನಿನ್ನೆ ಬುಧವಾರ ಏರ್ ಇಂಡಿಯಾ ಎಕ್ಸ್ಪ್ರೆಸ್‌ನ 300 ಉದ್ಯೋಗಿಗಳು ಸಾಮೂಹಿಕವಾಗಿ ಸಿಕ್ ಲೀವ್ ಪಡೆದಿದ್ದರು. ಅಲ್ಲದೇ ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದರಿಂದ ನಿನ್ನೆ ಬರೋಬ್ಬರಿ 76 ವಿಮಾನಗಳು ರದ್ದಾಗಲು ಕಾರಣವಾಗಿತ್ತು. ಈ ಕಾರಣಕ್ಕೆ ರಜೆ ಹಾಕಿದವರ ವಿರುದ್ಧ ಕ್ರಮ ಜರುಗಿಸುತ್ತಿದೆ. ಸದ್ಯಕ್ಕೆ 30 ಮಂದಿಯನ್ನು ಲೇ ಆಫ್ ಮಾಡಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಸೇರಿ 3 ಭಯೋತ್ಪಾದಕರ ಹತ್ಯೆ

https://youtu.be/XMh0gUEtwQ4?si=S7cwsJ7h4fwvuPxR

ಈ ಸಾಮೂಹಿಕ ರಜೆ ಸಕಾರಣವಿಲ್ಲದೇ ಪೂರ್ವಯೋಜಿತವಾಗಿ ತೆಗೆದುಕೊಂಡಿದ್ದು ಎಂದು ಕಂಪನಿ ಕಾರಣ ನೀಡಿ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಸಾಮೂಹಿಕವಾಗಿ ರಜೆ ಹಾಕಿದ ಇತರ ಉದ್ಯೋಗಿಗಳಲ್ಲಿ ಹೆಚ್ಚಿನವರನ್ನು ಕೆಲಸದಿಂದ ತೆಗೆಯಬಹುದು. ಇದನ್ನೂ ಓದಿ: ಹೆಣ್ಮಕ್ಳೆ ಸ್ಟ್ರಾಂಗು ಗುರೂ – ಈ ಬಾರಿಯೂ SSLC ಪರೀಕ್ಷೆಯಲ್ಲಿ ಬಾಲಕಿಯರೇ ಮೇಲೂಗೈ

https://youtu.be/NDNmrmJgMPo?si=jcsfEuvnEtEY7E43

ರಜೆ ಹಾಕಲು ಕಾರಣವೇನು?
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಸ್ಥೆಯ ಹೊಸ ಉದ್ಯೋಗ ನಿಯಮಗಳ ಬಗ್ಗೆ ಅನೇಕ ಉದ್ಯೋಗಿಗಳಿಗೆ ಅಸಮಾಧಾನ ಇದೆ. ಜೊತೆಗೆ ಸಿಬ್ಬಂದಿಯೊಳಗೆ ತಾರತಮ್ಯತೆ ಇದೆ. ಹಿರಿಯ ಸ್ಥಾನಗಳಿಗೆಂದು ನಡೆದ ಸಂದರ್ಶನದಲ್ಲಿ ಆಯ್ಕೆಯಾಗಿರುವ ಉದ್ಯೋಗಿಗಳಿಗೆ ಕಿರು ಹುದ್ದೆಗಳನ್ನು ನೀಡಲಾಗುತ್ತಿದೆ. ಸಂಬಳದಲ್ಲೂ ಕೊಕ್ಕೆ ಹಾಕಲಾಗುತ್ತಿದೆ. ಇವೇ ಮುಂತಾದ ಕಾರಣಗಳಿಗೆ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿರುವುದು ಗೊತ್ತಾಗಿದೆ. ಇದನ್ನೂ ಓದಿ:ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಫಸ್ಟ್‌ ಡೇ ; ಹೀಗಿದೆ ಐಷರಾಮಿ ರಾಜಕಾರಣಿಯ ಸೆರೆವಾಸ

.

Share with Friends
author avatar
News Desk