ಜಮ್ಮು-ಕಾಶ್ಮೀರದ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಸೇರಿ 3 ಭಯೋತ್ಪಾದಕರ ಹತ್ಯೆ
ಶ್ರೀನಗರ: ಕಾಶ್ಮೀರದ (Kashmir) ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ (Encounter) ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಎಲ್‌ಇಟಿ ಕಮಾಂಡರ್ ಸೇರಿ ಮೂವರ ಹತ್ಯೆಯಾಗಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ರೆಡ್ವಾನಿ ಪಯೀನ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಫಸ್ಟ್ ಡೇ ; ಹೀಗಿದೆ ಐಷರಾಮಿ ರಾಜಕಾರಣಿಯ ಸೆರೆವಾಸ
ರೆಡ್ವಾನಿ ಪಯೀನ್‌ನ ನಿವಾಸಿ ಬಸಿತ್ ಅಹ್ಮದ್ ದಾರ್, ಲಷ್ಕರ್-ಎ-ತೈಬಾ (LET) ಆಫ್‌ಶೂಟ್ ಗ್ರೂಪ್ ಮತ್ತು ದಿ ರೆಸಿಸ್ಟೆಂಟ್ ಫ್ರಂಟ್ (TRF)ನ ಕಮಾಂಡರ್ ಆಗಿದ್ದ. ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯ ಹತ್ಯೆಗಳಲ್ಲಿ ಭಾಗಿಯಾಗಿದ್ದರು. ದಾರ್ ಜೊತೆ ಹತ್ಯೆಗೊಳಗಾದ ಇಬ್ಬರು ಎಲ್‌ಇಟಿ ಭಯೋತ್ಪಾದಕರು ಮೋಮಿನ್ ಗುಲ್ಜಾರ್ ಮತ್ತು ಫಾಹಿಮ್ ಅಹ್ಮದ್ ಬಾಬಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಭಾರತಕ್ಕೆ ಭೇಟಿ ನೀಡಿದ ಮಾಲ್ಡೀವ್ಸ್ ವಿದೇಶಾಂಗ ಸಚಿವ
18 ಹತ್ಯೆಗಳಲ್ಲಿ ಭಾಗಿಯಾಗಿದ್ದವರನ್ನು ಎನ್‌ಕೌಂಟರ್ ಮಾಡಿರುವುದು ನಮಗೆ ದೊಡ್ಡ ಸಾಧನೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ, ನಾಗರಿಕರು ಮತ್ತು ಅಲ್ಪಸಂಖ್ಯಾತರು ಸೇರಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿ ಕೆ ಬಿರ್ಡಿ ತಿಳಿಸಿದ್ದಾರೆ.ಇದನ್ನೂ ಓದಿ: ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ
