Latest

ವಿಶ್ವವಿಖ್ಯಾತ ಮಹಿಳೆಯರು: ಅಕ್ಕಮಹಾದೇವಿ ಪತಿಯನ್ನು ಬಿಟ್ಟಿದ್ದೇಕೆ?

ಮಹಿಳೆಯರು ಇಂದು ಕಾಲಿರಿಸಿದ ರಂಗವಿಲ್ಲ, ಕ್ಷೇತ್ರವಿಲ್ಲ. ಈ ಹಿಂದೆ ಮಹಿಳೆಯರು ಕೇವಲ ಆಡುಗೆ ಮನೆ ಮತ್ತು ನಾಲ್ಕು ಗೋಡೆಗಳ ಮಧ್ಯೆ ಅಷ್ಟೇ ಸಿಮೀತವಾಗಿದ್ದರು. ಆದರೆ ಈಗ ಹಾಗಲ್ಲ. ನಮ್ಮ ಪ್ರಖ್ಯಾತ ಸಿನಿಮಾ ನಿದೇರ್ಶಕ ಯೋಗರಾಜ್ ಭಟ್ ಅವರು ಹೇಳಿದಂತೆ ಹೆಣ್ಮಕ್ಳೇ ಸ್ಟಾçಂಗ್ ಗುರು.

ಅಡಿಗೆ ಮನೆಯಲ್ಲಿ ಅಡಿಗೆ ಮಾಡುತ್ತಿದ್ದ ಕೈಗಳು ಪುಸ್ತಕಗಳನ್ನ ಹಿಡಿಯಿತು. ಕತ್ತಿ ಹಿಡಿದ ಕೈ ರಾಜ್ಯವಾಳಿತು. ಕೈ ರಾಜ್ಯವಾಳಿತು. ಮಹಿಳೆ ಇಂದು ಆಡಳಿತ ಗಾರಳೂ ಹೌದು. ಕರುಣೆ, ಮಮತೆ ತೋರುವ ಸಮಾಜಸೇವಕಿಯೂ ಹೌದು. ಕಲಾವಿದೆ, ಕೋವಿದೆ, ಕವಯಿತ್ರಿ, ಪೊಲೀಸ್ ಅಧಿಕಾರಿ, ಶಿಕ್ಷಣತಜ್ಞೆ, ಕುಲಪತಿ, ವೈದ್ಯೆ, ಸ್ವಾತಂತ್ರ‍್ಯ ಹೋರಾಟಗಾರ್ತಿ, ಕ್ರಾಂತಿಕಾರಿ, ಪತಿಸೇವಾಪರಾಯಣೆ, ದೇಶಭಕ್ತ, ಆಟಗಾರ್ತಿ, ದಾದಿ, ಗಗನಗಾಮಿ, ನಾಟ್ಯ ಸರಸ್ವತಿ, ವಚನಗಾರ್ತಿ ಈ ಎಲ್ಲ ಆಗಿದ್ದಾಳೆ.


ವಿಶ್ವನಾರಿ ಆದರ್ಶ ಸ್ತ್ರೀಯಾಗಿದ್ದಾಳೆ. ಭಾರತೀಯ ನಾರಿ ಹಿಂದೆಂದೂ ತೋರದ ಧೈರ್ಯ ಸಾಹಸಗಳನ್ನು ತೋರಿ ದೇಶ ರಕ್ಷಿಸಿ, ಪಾಲಿಸಿ ಕೀರ್ತಿ ತಂದಿದ್ದಾಳೆ. ತಾಯಿ ಹೃದಯದ ಸ್ತ್ರೀ ತಾಳ್ಮೆ ತೋರಿದ್ದಾಳೆ. ಇಂತಹ ಮಹಿಳೆಯರು ಹಲವರು,ಅದರಲ್ಲಿ ಅಕ್ಕಮಹಾದೇವಿ ಅವರು ಕೂಡ ಒಬ್ಬರು.

ಕನ್ನಡದಲ್ಲಿ (Kannada) ‘ವಚನ ಸಾಹಿತ್ಯ’ ಒಂದು ಜನಪ್ರಿಯ ಸಾಹಿತ್ಯ ಪ್ರಕಾರ ಇದುವರೆಗೆ ನೂರಾರು ವಚನಕಾರರು ಆಗಿ ಹೋಗಿದ್ದಾರೆ. ಈ ವಚನಗಳಲ್ಲಿ ನಿಗೂಢ ವಿಷಯವನ್ನು ತುಂಬ ಜನರಿಗೆ ಮನಮುಟ್ಟುವಂತೆ ಹಾಡಿದ ವಚನಕಾರರೆಷ್ಟೋ, ಮಹಿಳೆಯರೂ ವಚನಗಳನ್ನು ರಚಿಸಿ ಇಂದಿಗೂ ಮನೆಮಾತಾಗಿದ್ದಾರೆ. ಅವರ ಪೈಕಿ ಅಕ್ಕಮಹಾದೇವಿ ಒಬ್ಬಳು. ಸರಳ ಮಾತಿನಲ್ಲಿ ಭಕ್ತಿ ಭಾವ ತುಂಬಿ ಮನಸ್ಸಿಗೆ ತಟ್ಟುವಂತೆ ವಚನಗಳನ್ನು ರಚಿಸಿದ ಮೊದಲ ಕವಯಿತ್ರಿ ಹಾಗೂ ಶಿವಶರಣೆ ಅಕ್ಕಮಹಾದೇವಿ. ಹಿಂದಿ ಸಾಹಿತ್ಯದಲ್ಲಿನ ಮೀರಾಬಾಯಿಯಂತೆ.

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯಾ ಸಮುದ್ರದ ತಡಿಯಲ್ಲಿ ಮನೆಯ ಮಾಡಿ ನೊರೆ ತೆರೆಗಳಿಗಂಜಿದೊಡೆಂತಯ್ಯಾ. ಇದು ಅಕ್ಕಮಹಾದೇವಿಯ ಒಂದು ವಚನ. ಇಂತಹವು ಆಕೆಯವು ನೂರಾರು. ಈಕೆ ಕರ್ನಾಟಕದಲ್ಲಿ ಹುಟ್ಟಿದಳು. ಶಿವಮೊಗ್ಗ (Shivamooga) ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ ಅಕ್ಕಮಹಾದೇವಿಗೆ (Akkamahadevi) ಜನ್ಮ ಕೊಟ್ಟ, ಸ್ಥಳ.

ಈಕೆಯ ರೂಪರಾಶಿಗೆ ಮನಸೋತ ಊರಿನ ರಾಜ ಕೌಶಿಕ ಇವಳನ್ನು ಮದುವೆಯಾಗಲಿಚ್ಛಿಸಿದ. ಆದರೆ ಚೆನ್ನ ಮಲ್ಲಿಕಾರ್ಜುನ ಅಂದರೆ ಈಶ್ವರನೇ ತನ್ನ ಪತಿಎಂದು ಭಾವಿಸಿದ ಅಕ್ಕಮಹಾದೇವಿಗೆ ಈ ಮದುವೆ ಇಷ್ಟವಿರಲಿಲ್ಲ. ಆದರೂ ತಂದೆ ತಾಯಿಗಳ ಬಲವಂತಕ್ಕೆ ಕಟ್ಟುಬಿದ್ದು ಕೌಶಿಕನನ್ನು ಮದುವೆಯಾದಳು. ಆದರೆ ತನ್ನ ಗುರು, ಲಿಂಗ, ಜಂಗಮ ಪೂಜೆಗೆ ತೊಂದರೆ ಕೊಡಬಾರದೆಂದು ಷರತ್ತು ಹಾಕಿದಳು.

ರಾಜ ಎಲ್ಲ ಷರತ್ತುಗಳನ್ನು ಮರೆತು ತಪ್ಪು ದಾರಿ ಹಿಡಿದ. ಅಕ್ಕನ ದೈವಭಕ್ತಿಗೆ ಅಡ್ಡಿಯಾಗಿ ಅವಳು ಮನೆಬಿಟ್ಟು ತನ್ನ ಪತಿ ಚೆನ್ನಮಲ್ಲಿಕಾರ್ಜುನನನ್ನು ಹುಡುಕುತ್ತ ಶ್ರೀಶೈಲದ ಕಡೆಗೆ ಹೊರಟಳು. ದಾರಿಯಲ್ಲಿ ಶ್ರೇಷ್ಠ ವಚನಕಾರರಾದ ಬಸವಣ್ಣ, ಅಲ್ಲಮಪ್ರಭು ಮೊದಲಾದ ಶಿವಶರಣರು ಇರುತ್ತಿದ್ದ ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ ಸ್ವಲ್ಪ ಕಾಲ ಸತ್ಸಂಗ ಮಾಡಿ ಶ್ರೀಶೈಲಕ್ಕೆ ಹೊರಟು ಬಂದು ಕದಳೀವನದಲ್ಲಿ ಐಕ್ಕಳಾದಳು.

ಅಕ್ಕಮಹಾದೇವಿ ವಚನಗಳನ್ನು ಬರೆಯುವುದರ ಜೊತೆಗೆ ‘ಯೋಗಾಂಗತ್ರಿ ವಿಧಿ’ ಎಂಬ ಅರವತ್ತೇಳು ತ್ರಿಪದಿಗಳಿರುವ ತತ್ವ ವಿಚಾರ ಗ್ರಂಥವನ್ನು ಬರೆದಿದ್ದಾಳೆ. ಇಂದಿಗೂ ಅಕ್ಕನ ವಚನಗಳು ಭಕ್ತಜನಕ್ಕೆ ಇಷ್ಟವಾಗಿ ಗಾಯಕರ ನಾಲಿಗೆಗಳಲ್ಲಿ ನಲಿದಿವೆ.

Source: ಬೆ.ಗೋ. ರಮೇಶ್‌ (ವಿಶ್ವವಿಖ್ಯಾತ ಮಹಿಳೆಯರು)

Share with Friends
author avatar
News Desk