Crime NewsLatestರಾಷ್ಟ್ರೀಯ-National

ಅಮಿತ್ ಶಾ ವಿರುದ್ಧದ ಫೇಕ್ ವಿಡಿಯೋ ಪ್ರಕರಣ, ತೆಲಂಗಾಣ ಕಾಂಗ್ರೆಸ್ ಘಟಕದ ಐಟಿ ಸೆಲ್‌ನ ಮೂವರ ಬಂಧನ

ಹೈದರಾಬಾದ್: ಕೇಂದ್ರ ಸಚಿವ ಅಮಿತ್ ಶಾ (Amith Shah) ವಿರುದ್ಧದ ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ತೆಲಂಗಾಣ ಕಾಂಗ್ರೆಸ್ (Congress) ಐಟಿ ಸೆಲ್‌ನ ಮೂವರನ್ನು ಬಂಧಿಸಲಾಗಿದೆ.

ಮೀಸಲಾತಿ ತೆಗೆದುಹಾಕುವ ಬಗ್ಗೆ ವಿಡಿಯೋ ತಿರುಚಲಾಗಿತ್ತು, ಅಮಿತ್ ಶಾ ಹೇಳಿಕೆ ತಿರುಚಿ ವಿಡಿಯೋ ಮಾಡಲಾಗಿತ್ತು, ತೆಲಂಗಾಣದ ಕೆಲ ನಾಯಕರು ವಿಡಿಯೋ ಶೇರ್ ಮಾಡಿದ್ದರು. ಇದನ್ನೂ ಓದಿ: ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ: ಮೊಯ್ಲಿ

https://youtu.be/7ZX33HT5nQs?si=qMLlcaSsPJvHcOnj

ಸಿಆರ್‌ಪಿಸಿಯ ಸೆಕ್ಷನ್ 91ರ ಅಡಿಯಲ್ಲಿ ಸತೀಶ್ ಮನ್ನೆ, ನವೀನ್ ಪೆಟ್ಟೆಮ್ ಮತ್ತು ಅಸ್ಮಾ ತಸ್ಲೀಮ್ ವಿರುದ್ಧ ಪ್ರಕರಣ ದಾಖಲಾಗಿದೆ. ಮೀಸಲಾತಿ ಹೇಳಿಕೆಯನ್ನು ತಿರುಚಿ ವಿಡಿಯೋ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಗೆ ದೆಹಲಿ ಪೊಲೀಸರು ಈಗಾಗಲೇ ಸಮನ್ಸ್ ಜಾರಿ ಮಾಡಿದ್ದಾರೆ. ರೇವಂತ್ ರೆಡ್ಡಿ ಸೇರಿದಂತೆ ತೆಲಂಗಾಣ ಮೂಲದ ಇತರ ನಾಲ್ವರಿಗೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಜಾತಿ ನಿಂದನೆ ಕೇಸ್‌ಗೆ ಹೆದರಿ 23 ವರ್ಷದ ಯುವಕ ಆತ್ಮಹತ್ಯೆ ಶರಣು

https://youtu.be/VdisxEZw61M?si=FInAMrYQNag-UVjm
Share with Friends
author avatar
News Desk