EntertainmentLatestಚುನಾವಣೆ-Electionಬೆಂಗಳೂರು-Bengaluruರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ಒಟ್ಟಾಗಿ ಬಂದು ಮತದಾನ ಮಾಡಿದ ದೊಡ್ಮನೆ ಮಂದಿ

ಲೋಕಸಭಾ ಚುನಾವಣೆಗೆ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ನಮ್ಮ ಸ್ಯಾಂಡಲ್‌ವುಡ್ (Sandalwood) ನಟ ನಟಿಯರು ಕೂಡ ಸಾಲು ಸಾಲಾಗಿ ಬಂದು ಮತ ಚಲಾಯಿಸುತ್ತಿದ್ದಾರೆ.

ಡಾ.ರಾಜ್‌ಕುಮಾರ್ ಅವರ ಕುಟುಂಬದ ಅನೇಕ ಸದಸ್ಯರು ಜೊತೆಯಾಗಿ ಬಂದು ಮತಚಲಾಯಿಸಿದರು. ರಾಘವೇಂದ್ರ ರಾಜ್‌ಕುಮಾರ್ (Ragahavendra Rajkumar) , ಅವರ ಪತ್ನಿ ಮಂಗಳ ರಾಘವೆಂದ್ರ ರಾಜ್‌ಕುಮಾರ್ ಮತ್ತು ಮಕ್ಕಳಾದ ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Rajkumar) ಅವರ ಒಟ್ಟಾಗಿ ಬಂದು ಮತದನ (Vote) ಮಾಡಿದ್ದಾರೆ.

https://youtu.be/DbyxeBZAkXM?si=0ywte97NVN00ReoV

ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮ9ಆತನಾಡಿದ ರಾಘವೇಂದ್ರ ರಾಜ್‌ಕುಮಾರ್ “ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಚಲಾಯಿಸಿ ಎಂದು ಹೇಳಿದ್ದರು.

ಈ ಮೊದಲು ಅಪ್ಪ ಅಮ್ಮನ ಜೊತೆ ಬಂದು ವೋಟು ಮಾಡುತ್ತಿದ್ದೆವು. ಅಮೇಲೆ ಅಪ್ಪು ಜೊತೆ ಬಂದೆ. ಈಗ ಒಬ್ಬೊಬ್ಬರೆ ಹೋಗುತ್ತಿದ್ದಾರೆ. ಮುಂದಿನ ಪೀಳಿಗೆ ಮತದಾನಕ್ಕೆ ಸಜ್ಜಾಗುತ್ತಿದೆ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ.

Share with Friends
author avatar
News Desk