Crime NewsLatestಚಿತ್ರದುರ್ಗ-Chitradurgaರಾಜ್ಯ-Karnataka

ಜೈಲಿನಲ್ಲಿ ಹಣ ಬೇಡಿಕೆ ಇಟ್ಟ ಜೈಲರ್ ಸಸ್ಪೆಂಡ್

ಚಿತ್ರದುರ್ಗ: ಜೈಲಿನಲ್ಲಿ ಬಂಧಿಗಳಿಗೆ ಹಣ ಬೇಡಿಕೆ ಇಟ್ಟಿರುವ ಆರೋಪದ ಮೇಲೆ ಜೈಲರ್ (Jailer) ಅನ್ನು ಸಸ್ಪೆಂಡ್ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

ಶ್ರೀಮಂತಗೌಡ ಪಾಟೀಲ್ ಅಮಾನತ್ತಾಗಿರುವ ಜೈಲರ್. ಸಂದರ್ಶನದ ವೇಳೆ ಜೈಲಿನಲ್ಲಿ ಬಂಧಿಗಳಿಗೆ ಹಣ ಬೇಡಿಕೆ ಇಟ್ಟಿರುವ ಆರೋಪ ಹಿನ್ನೆಲೆ ಶ್ರೀಮಂತಗೌಡ ಪಾಟೀಲ್ ಅಮಾನತುಗೊಳಿಸಲಾಗಿದೆ. ಜೈಲಿನಲ್ಲಿ ಗಲಾಟೆ ನಡೆದ ವೇಳೆ ಶಿಸ್ತು ಕ್ರಮ ಜರುಗಿಸಿಲ್ಲ ಎಂಬ ಆರೋಪದಡಿ ಕೂಡ ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ದಂಪತಿಗೆ ಇಡಿ ಶಾಕ್ – 98 ಕೋಟಿ ಮೌಲ್ಯದ ಆಸ್ತಿ ವಶಕ್ಕೆ

https://youtu.be/n6TR5sFjO68?si=haTnbqq6Kr0g-O-t

ಕಾರಗೃಹ ಮಹಾ ನಿರ್ದೇಶಕ ಮಾಲಿನಿ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿ ಅಮಾನತು ಮಾಡಿ ಆದೇಶಿಸಿದ್ದಾರೆ. ಅವರ ಆದೇಶದಂತೆ ಶ್ರೀಮಂತಗೌಡ ಪಾಟೀಲ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಇದನ್ನೂ ಓದಿ:  ಕೇಸರಿ ಕಿಚ್ಚು, ತೆರೇಸಾ ಶಾಲೆ ವಿರುದ್ಧ ದಂಗೆ ಎದ್ದ ಹಿಂದೂ ಸಂಘಟನೆ

ಜೈಲಿನಲ್ಲಿ ಕೆಲ ಆರೋಪಿಗಳು ಚಂದ್ರಪ್ಪ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದವರ ವಿರುದ್ದ ಕ್ರಮ ಜರುಗಿಸಿಲ್ಲ ಎಂದು ಆರೋಪಿ ಚಂದ್ರಪ್ಪ ಆರೋಪ ಮಾಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಕತ್ಯವ್ಯಲೋಪ ಎಸಗಿರುವ ಹಿನ್ನೆಲೆ ಶ್ರೀಮಂತಗೌಡ ಪಾಟೀಲ್ ಸಸ್ಪೆಂಡ್ ಆಗಿದ್ದಾರೆ. ಇದನ್ನೂ ಓದಿ:  ಕೈ ಅಧಿಕಾರಕ್ಕೆ ಬಂದರೆ ದೇಶದ್ಯಾಂತ ಜಾತಿ ಗಣತಿ: ರಾಹುಲ್ ಗಾಂಧಿ

https://youtu.be/GpS2c14GVR0?si=SOtjalxd7u8sEyQr
Share with Friends
author avatar
News Desk