BlogEntertainmentTop Storiesರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ರೇಣುಕಸ್ವಾಮಿ ಕೊಲೆ ಪ್ರಕರಣ : ದರ್ಶನ್, ಪವಿತ್ರ ಗೌಡ ಸೇರಿ 12 ಆರೋಪಿಗಳ ಜಾಮೀನು ಅರ್ಜಿ ವಜಾ

ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ 12 ಆರೋಪಿಗಳ ಜಾಮೀನು ಅರ್ಜಿ ವಜಾ ಗೊಂಡಿದೆ. ಜಾಮಿನಿಗಾಗಿ ಕಾಯುತ್ತಿದ್ದ ನಟ ದರ್ಶನ್ ಗೆ ನ್ಯಾಯಾಲಯದ ತೀರ್ಪು ಶಾಕ್ ನೀಡಿದ್ದು ಇನ್ನಷ್ಟು ದಿನಗಳ ಕಾಲ ದರ್ಶನ್ ಗೆ ಜೈಲೇ ಗತಿಯಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಈಗಾಗಲೇ ಮೂವರು ಆರೋಪಿಗಳಿಗೆ ಜಾಮೀನು ದೊರೆತಿತ್ತು ಇಂದು ರವಿಶಂಕರ್ ಮತ್ತು ಪ್ರದೀಪ್ ಎಂಬ ಆರೋಪಿಗಳಿಗೆ ಜಾಮೀನು ದೊರೆತಿದ್ದು ಒಟ್ಟಾರೆ ಪ್ರಕರಣದ 5 ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು ಉಳಿದ 12 ಆರೋಪಿಗಳ ಜಾಮೀನು ಅರ್ಜಿ ವಜಾ ಗೊಂಡಿದೆ.

ಜಾಮೀನು ಅರ್ಜಿ ವಿಚಾರಣೆ ನಡೆಸಿದ 57ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಜೈ ಶಂಕರವರು ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ 12 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು .

ನಟ ದರ್ಶನ್ ಅವರನ್ನು ಬಳ್ಳಾರಿಗೆ ಸ್ಥಳಾಂತರ ಮಾಡಲಾಗಿತ್ತು ದರ್ಶನ್ ಅವರು 110 ದಿನಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನಿಗಾಗಿ ಹರಸಾಹಸ ಪಡುತ್ತಿದ್ದರು ದರ್ಶನ್ ಪರ ಖ್ಯಾತ ವಕೀಲ ಸಿವಿ ನಾಗೇಶ್ ಪ್ರಬಲವಾದ ವಾದ ಮಂಡಿಸಿದ್ದರಪ್ರಾಷಿಕ್ಯೂಷನ್ ಪರವಾಗಿ ವಿಶೇಷ ಅಬಿ ಯೋಜಕರಾದ ಪ್ರಸನ್ನ ಅವರು ಪ್ರಬಲವಾದ ವಾದ ಮಂಡಿಸಿದ್ದರು ವಾದ ಪ್ರತಿವಾದ ಅಲಿಸಿದ್ದ ನ್ಯಾಯಾಧೀಶರು ತೀರ್ಪನ್ನ ಕಾಯ್ದಿರಿಸಿದ್ದರು ಕಾಯ್ದಿರಿಸಿದ ತೀರ್ಪು ನೀಡಿದ ನ್ಯಾಯಾಧೀಶರು ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿ ಉಳಿದ 12 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದರು.

ಜಾಮೀನು ಸಿಗುತ್ತದೆ ಎಂದು ಕಾಯುತ್ತಿದ್ದ ದರ್ಶನ್ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿದೆ ಬಳ್ಳಾರಿ ಜೈಲಿನಲ್ಲಿರುವ ದರ್ಶನವರು ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು ಅನಾರೋಗ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ ಜಾಮೀನು ಅರ್ಜಿ ವಜಗೊಂಡ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಶೀಘ್ರವೇ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ ರಾಜ್ಯ ಮತ್ತು ದೇಶಾದ್ಯಂತ ತೀವ್ರ ಸಂಚಲನವನ್ನು ಸೃಷ್ಟಿ ಮಾಡಿತ್ತು ಕೊಲೆ ಪ್ರಕರಣದಲ್ಲಿ ಪ್ರತಿಷ್ಠಿತ ನಟ ದರ್ಶನ್ ಸೇರಿದಂತೆ 17 ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸಿ 400 ಪುಟಗಳ ಚಾರ್ಜ್ ಷಿಟ್ ಸಲ್ಲಿಸಿದ್ದರು ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಆರೋಪಿಗಳು ಪರಪ್ಪನ ಅಗ್ರಹಾರ ಸೇರಿದ್ದರು ಪರಪ್ಪನ ಅಗ್ರಹಾರದಲ್ಲಿ ರಾಜ್ಯಾತಿಥ್ಯ ಪ್ರಕರಣ ಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು.

Share with Friends
author avatar
News Desk