Latestಕೊಪ್ಪಳ-Koppalaರಾಜ್ಯ-Karnataka

ಕೊಳವೆ ಬಾವಿ ಮುಚ್ಚಿ ಹಣ ಪಡೆಯಿರಿ- ವಿಜಯಪುರ ಪ್ರಕರಣ ಬಳಿಕ ಅಭಿಯಾನ ಮತ್ತೆ ಶುರು

ಕೊಪ್ಪಳ: ನಿನ್ನೆ ಇಂಡಿ ತಾಲ್ಲೂಕಿನ ಗ್ರಾಮದ 2 ವರ್ಷದ ಮಗು ಸಾತ್ವಿಕ್ ಸಾವು ಗೆದ್ದು ಬಂದಿರುವುದು ದೊಡ್ಡ್ ಪವಾಡ. ಈ ವಿಚಾರ ಒಂದು ಕಡೆಯಾದರೆ, ರಾಜ್ಯದಲ್ಲಿ ಆಗಾಗ ಸಂಭವಿಸುತ್ತಿರುವ ಕೊಳವೆ ಬಾವಿ ಪ್ರಕಜರಣಗಳೂ ದೊಡ್ಡ್ ತಲೆನೋವು ತಂದಿಡುವoತೆ ಮಾಡುತ್ತಿವೆ.

ಈ ರೀತಿ ದುರಂತಗಳ ಬಗ್ಗೆ ಜಾಗೃತಿ ಮುಡಿಸಿದರೂ ಕೆಲವು ರೈತರು ತೆರೆದ ಕೊಳವೆ ಬಾವಿಗಳನ್ನು ಮುಚ್ಚದಿರೋದು ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಆಗಿ ಮಂದುವರೆಯಲಿ ಎಂದ ಹೈಕೋರ್ಟ್

https://youtu.be/ODS2Izo8Lsk?si=10VNulfDnY_O_hwF

ಆದರೆ ಇದೀಗ ಇದನ್ನು ಮತ್ತೆ ಗಂಭೀರವಾಗಿ ಪರಿಗಣೀಸಿರುವ ಗಂಗಾವತಿಯ ಶಿವಣ್ಣ ಚಳ್ಳಿಕೆರಿ, ಕೊಳವೆ ಬಾವಿ ಮುಚ್ಚಿಸಲು ಮತ್ತೆ ಅಭಿಯಾನ ಶುರು ಮಾಡಿದ್ದಾರೆ. ತೆರೆದ ಕೊಳವೆ ಬಾವಿ ಮುಚ್ಚಿದ್ರೆ 500 ರೂ. ಪ್ರೋತ್ಸಹ ಧನ ನೀಡುವುದಾಗಿ ರೈತರಿಗೆ ಘೋಷಣೆ ಮಾಡಿದ್ದಾರೆ. ಜಮೀನುಗಳಲ್ಲಿ ಕೊಳವೆ ಬಾವಿಗಳನ್ನು ಹಾಗೆಯೇ ಯಾರೆಲ್ಲ ಬಿಟ್ಟುಕೊಂಡಿದ್ದೀರಿ ಈ ಕೂಡಲೆ ಮುಚ್ಚಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಮನೆಯೊಂದರ ಕಪಾಟಿನಲ್ಲಿ ಮಹಿಳೆಯ ಶವ ಪತ್ತೆ, ಲೈವ್- ಇನ್ ಸಂಗಾತಿ ಮೇಲೆ ಅನುಮಾನ

ಅಂದಹಾಗೆ ಶಿವಣ್ಣ ಅವರು ತೆರೆದ ಕೊಳವೆ ಬಾವಿ ವಿರುದ್ಧ ನಡೆಸ್ತಿರುವ ಅಭಿಯಾನ ಹೊಸದೇನೂ ಅಲ್ಲ. 2017, 2018, 2019ರಲ್ಲಿಯೂ ಈ ಅಭಿಯಾನವನ್ನು ಕೈಗೊಂಡಿದ್ದರು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಇದಕ್ಕಾಗಿ ವಿನಿಯೋಗಿಸಿ, ಕೊಪ್ಪಳ ಜಿಲ್ಲೆಯಲ್ಲಿದ್ದ ಎಲ್ಲಾ ಕೊಳವೆ ಬಾವಿಗಳನ್ನು ಮುಚ್ಚಿಸಿದ್ದರು. ಇದನ್ನೂ ಓದಿ:  ಆರ್ಮಿ ಆಫೀಸ್ ಎಂದು ನಂಬಿಸಿ , ಹಣ ಕೇಳಿದ್ರೆ ಫೇಕ್ ಪೇಮೆಂಟ್

ಇದೀಗ ವಿಜಯಪುರ ಘಟನೆ ಬೆನ್ನಲ್ಲೇ ಮತ್ತೆ ಅಭಿಯಾನ ಹಮ್ಮಿಕೊಂಡಿದ್ದಾರೆ. ನನಗೆ ವಯಸ್ಸು ಆಗಿರೋದ್ರಿಂದ ಇಡೀ ರಾಜ್ಯ ಸುತ್ತೋದು ಈಗ ಆಗುತ್ತಿಲ್ಲ. ಈ ಮೊದಲು ನಾನು ಆ ಕೆಲಸವನ್ನು ಮಾಡಿದ್ದೇನೆ. ಯಾರೆಲ್ಲ, ಕೊಳವೆ ಬಾವಿಗಳನ್ನು ಮುಚ್ಚುತ್ತಿದ್ದೀರೋ ಅವರು ನನ್ನನ್ನು ಫೋನ್ ಮೂಲಕ ಸಂರ‍್ಕಿಸಿ. ನಾನು ನೀಡ್ತಿರೋದು ಬಹುಮಾನ ಅಲ್ಲ. ಮತ್ತೆ ಈ ರೀತಿಯ ಘಟನೆಗಳು ಸಂಭವಿಸಬಾರದು. ಮಾನವೀಯ ಕರ‍್ಯಗಳು ಆಗಬೇಕು ಎಂಬುವು ನನ್ನ ಉದ್ದೇಶ ಎನ್ನುತ್ತಾರೆ ಶಿವಣ್ಣ ಚಳ್ಳಿಕೇರಿ. ಇದನ್ನೂ ಓದಿ:  ಕ್ರಿಮಿನಲ್‌ಗಳು ಜೈಲಿಗೆ ಹೋಗಲು ಹೆದರುತ್ತಿದ್ದಾರೆ: ಯೋಗಿ ಅದಿತ್ಯನಾಥ್

ಹಲವು ರ‍್ಷಗಳಿಂದ ಇಂತಹ ಅಭಿಯಾನಗಳನ್ನು ಮಾಡಿಕೊಂಡು ಬರುತ್ತಿರುವ ಶಿವಣ್ಣರ ಕರ‍್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಮತ್ತೆ ಕೊಳವೆ ಬಾವಿ ಮುಚ್ಚಿಸಲು ಮುಂದಾಗಿರುವ ಶಿವಣ್ಣ ಕರ‍್ಯ ನೋಡಿದ್ರೆ ರ‍್ಕಾರಕ್ಕೆ ನಾಚಿಕೆ ಆಗಬೇಕು ಎನ್ನುತ್ತಿದ್ದಾರೆ ಜನ. ಇದನ್ನೂ ಓದಿ:ಯುಗಾದಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ಗುಡ್‌ನ್ಯೂಸ್!

https://youtu.be/0Nyx7Oqxwo4?si=ybBXOjNP7UodhZP_
Share with Friends
author avatar
News Desk