Crime NewsLatestಬೆಂಗಳೂರು-Bengaluruರಾಜ್ಯ-Karnataka

ಆರ್ಮಿ ಆಫೀಸ್ ಎಂದು ನಂಬಿಸಿ , ಹಣ ಕೇಳಿದ್ರೆ ಫೇಕ್ ಪೇಮೆಂಟ್

ಬೆಂಗಳೂರು: ಪ್ರತಿಷ್ಠಿತ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ ಹಣ ಪಾವತಿಸದೇ ವಂಚಿಸುತ್ತಿದ್ದ ಆರೋಪಿಯನ್ನು ನಗರದ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಬೊರಾಡ ಸುಧೀರ್ ಬಂಧಿತ ಆರೋಪಿ. ಈತ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡುತ್ತಿದ್ದ. ಹಣದ ಬಗ್ಗೆ ಕೇಳಿದ್ರೆ ಪಾವತಿ ಮಾಡುತ್ತಿನಿ ಎಂದು ಆಟವಾಡಿಸುತ್ತಿದ್ದ. ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌ಡಿಕೆ ನಾಮಪತ್ರ ಸಲ್ಲಿಕೆ: ಕೈ ವಿರುದ್ಧ ಮೈತ್ರಿ ನಾಯಕರ ಬಲ ಪ್ರದರ್ಶನ

https://youtu.be/IyHzNqww654?si=xXIcqESHBJsq23fH

ಕೊನೆಗೆ ನಕಲಿ ಪೆಮೆಂಟ್ ಮಾಡಿ ಸ್ಕ್ರೀನ್​ಶಾಟ್​​ಗಳನ್ನು ತೋರಿಸಿ ಯಾಮಾರಿಸುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು. ವಿಚಾರ ತಿಳಿದು ಹೋಟೆಲ್‌ನವರು ಆರೋಪಿಯನ್ನು ವಿಚಾರಿಸಿದ್ದಾಗ ನನ್ನ ಅಕೌಂಟ್‌ನಿಂದ ಹಣ ಕಡಿತವಾಗಿದೆ ನಿಮ್ಮ ಸರ್ವರ್‌ನಲ್ಲಿ ಸಮಸ್ಯೆ ಇದೆ ಎಂದು ನಂಬಿಸುತ್ತಿದ್ದ. ಇದನ್ನೂ ಓದಿ: ಕೊನೆಗೂ ಕಾರ್ಯಾಚರಣೆ ಯಶಸ್ವಿ – ಸಾತ್ವಿಕ್‌ಗೆ ಸ್ವಾಗತ

https://youtu.be/62VpTr1ZFy4?si=sGYXI65nK2SezIbB

ಹೀಗೆ ಪ್ರತಿಷ್ಠಿತ ಹೋಟೆಲ್‌ನಲ್ಲಿ 80 ಸಾವಿರ ಬಿಲ್‌ನಲ್ಲಿ 10 ಸಾವಿರ ಪಾವತಿ ಮಾಡಿದ್ದ. ಬಾಕಿ ಉಳಿದ ಬಿಲ್ ಅನ್ನು ರಾತ್ರಿ ನೀಡುತ್ತೀನಿ ಎಂದು ಹೇಳೀದ್ದ. ಇದನ್ನೂ ಓದಿ:400 ಅಡಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

https://youtu.be/0Nyx7Oqxwo4?si=lhxPQiSHyivaFbaA

ಬಳಿಕ ಹೋಟೆಲ್ ಸಿಬ್ಬಂದಿ ರಾತ್ರಿ ಬಿಲ್ ಕೇಳಿದಾಗ ಸಲಿ ವಿಚಾರ ಬೆಳಕಿಗೆ ಬಂದಿದೆ. ನಂತರ ಅದೇ ಹೋಟೆಲ್​ನ ಬಿಎಂಡ್ಲೂ ಕಾರಿನಲ್ಲಿ ಏರ್​ಪೋರ್ಟ್​ಗೆ ಡ್ರಾಪ್ ಮಾಡೋದಕ್ಕೆ ಹೇಳಿದ್ದ. ಆಗ ಡ್ರೈವರ್ ನಾವು ನಮ್ಮ ಹೋಟೆಲ್‌ನಲ್ಲಿ ಅನುಮತಿ ಪಡಿಯಬೇಕು ಎಂದಿದ್ದ. ಈ ವೇಳೆ ಈತನ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಕೊಲ್ಕತ್ತಾದಲ್ಲಿ ತಾನು ಆರ್ಮಿ ಆಫೀಸರ್ ಎಂದು ನಂಬಿಸಿ ಯಾಮಾರಿಸಿದ್ದ. ಇದೀಗ ಹೈಗ್ರೌಂಡ್ಸ್ ಪೊಲೀಸರಿಂದ ಆರೋಪಿಯ ಬಂಧನವಾಗಿದೆ. ಇದನ್ನೂ ಓದಿ: ವಯನಾಡಿನಿಂದ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

https://youtu.be/Ondb9hbgGAk?si=Nx9Yh8NiNaYHkR5T
Share with Friends
author avatar
News Desk