ರಾಷ್ಟ್ರೀಯ-Nationalವಾಣಿಜ್ಯ

ಆರ್ಥಿಕ ವರ್ಷದ ಮೊದಲ ದಿನವೇ 6 ಬದಲಾವಣೆಗಳ ಜಾರಿ- ಯಾವ ಯಾವ ಬದಲಾವಣೆ

ಇಂದಿನಿoದ ಹಣಕಾಸು ವರ್ಷ ಆರಂಭವಾಹುತ್ತದೆ. ಆದರಿಂದ ದೇಶದಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಇಂದಿನಿoದ ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್, ಎನ್‌ಪಿಜಿ ಸೇರಿದಂತೆ 6 ಬದಲಾವಣೆಗಳು ಮಾಡಿದ್ದು, ಇವತ್ತಿನಿಂದ ಜಾರಿಗೆ ಬರುತ್ತವೆ. ಈ ಬಗ್ಗೆ ಸಂಪೊರ್ಣ ಮಾಹಿತಿ ಇಲ್ಲಿದೆ ನೋಡಿ.

 ವಾಣಿಜ್ಯ ಎಲ್​ಪಿಜಿ ದರ

ಗ್ರಾಹಕರಿಗೆ ಹೊರೆಯಾಗಿದ್ದ ಅನಿಲ ಸಿಲಿಂಡರ್​ಗಳ ದರದಲ್ಲಿ ಕೊಂಚ ಇಳಿಕೆ ಮಾಡಿದೆ. ಇಂದಿನಿಂದ ವಾಣಿಜ್ಯ ಎಲ್​ಜಿಪಿ ಹೊಸ ದರಗಳು ಜಾರಿಗೆ ಬಂದಿದ್ದು, 19 ಕೆಜಿ ಐPಉ ಸಿಲಿಂಡರ್​​ ಬೆಲೆ 32 ರೂಪಾಯಿ ಇಳಿಕೆ ಕಂಡಿದೆ.

ಇಪಿಎಸ್​​ ಹೊಸ ನಿಯಮ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೊರಡಿಸಿರುವ ಹೊಸ ನಿಯಮದ ಪ್ರಕಾರ, ಇಪಿಎಫ್​ ಖಾತೆದಾರನು ತನ್ನ ಉದ್ಯೋಗವನ್ನು ಬೇರೆಡೆಗೆ ಬದಲಾಯಿಸಿದ ತಕ್ಷಣ ಆತನ ಹಳೆಯ ಪಿಎಫ್​ ಬ್ಯಾಲೆನ್ಸ್ ಅನ್ನು ಹೊಸ ಖಾತೆಗೆ ರ‍್ಗಾಯಿಸಲಾಗುತ್ತದೆ. ಆದರೀಗ ಹಳೆಯ ಪಿಎಫ್​ ಬ್ಯಾಲೆನ್ಸ್​ ಅನ್ನು ರ‍್ಗಾಯಿಸುವ ಅಗತ್ಯವಿಲ್ಲ. ಅದು ಸ್ವಯಂಚಾಲುತವಾಗಿ ರ‍್ಗಾವಣೆ ಆಗುತ್ತದೆ.

ಫಾಸ್ಟ್​ಟ್ಯಾಗ್​ ಕೆವೈಸಿ

ಮರ‍್ಚ್ 31,2024ರೊಳಗೆ ಫಾಸ್ಟ್​ಟ್ಯಾಗ್​ ಕೆವೈಸಿಯನ್ನು ನವೀಕರಿಸಲು ಆದೇಶ ಹೊರಡಿಸಲಾಗಿತ್ತು. ಆದರೆ ನವೀಕರಿಸದವರು ಏಪ್ರಿಲ್​1 ರಿಂದ ಫಾಸ್ಟ್​ಟ್ಯಾಗ್​ ಸಮಸ್ಯೆ ಎದಿರಿಸಬಹುದು. ಹೀಗಾಗಿ ಇಂದೇ ನವೀಕರಿಸಿದರೆ ಸೂಕ್ತ.

ವಿಮಾ ಪಾಲಿಸಿ

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಮಾ ಪಾಲಿಸಿಗಳಿಗೆ ಡಿಜಿಟಲೀಕರಣ ಕಡ್ಡಾಯಗೊಳಿಸಿದೆ. ಅಂದಹಾಗೆಯೇ ಇಂದಿನಿಂದ ಈ ನಿಯಮ ಜಾರಿಗೆ ಬರಲಿದೆ. ಜೀವ ವಿಮೆ, ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ವಿಮೆಗಳು ಡಿಜಿಟಲೀಕರಣವಾಗುತ್ತದೆ. ಇದನ್ನು ಇ-ವಿಮಾ ಖಾತೆ ಎಂದು ಕರೆಯಲಾಗುತ್ತದೆ.

ಎನ್​ಪಿಎಸ್​ ನಿಯಮ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತವಾಗಿರಿಸಲು ಆಧಾರ್​ ಆಧಾರಿತ ಎರಡು ಹಂತದ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಿದೆ. ಪಾಸ್​ರ‍್ಡ್​ ರೂಪದ ಬಳಕೆಯಲ್ಲಿ ಸಿಗಲಿದೆ. ಇಂದಿನಿಂದ ಈ ನಿಯಮ ಜಾರಿಗೆ ಬರಲಿದೆ.

ಎಸ್​ಬಿಐ ಕ್ರೆಡಿಟ್​ ಕಾರ್ಡ್​

ಕೆಲವು ಕ್ರೆಡಿಟ್​ ಕರ‍್ಡ್​​ಗಳು ಹಣ ಪಾವತಿ ವಹಿವಾಟುಗಳ ರಿವರ‍್ಡ್​ ಪಾಯಿಂಟ್​ ಸಂಗ್ರಹವನ್ನು ನಿಲ್ಲಿಸುತ್ತಿದೆ. ಈಗಾಗಲೇ ಎಸ್​ಬಿಐ ಈ ವಿಚಾರವನ್ನು ಘೋಷಿಸಿದೆ. ಎಸ್​ಬಿಐ ಕರ‍್ಡ್​ ಎಲೈಟ್​ ಅಡ್ವಾಂಟೇಜ್​, ಎಸ್​ಬಿಐ ಕರ‍್ಡ್​​ ಪಲ್ಸ್​, ಸಿಂಪ್ಲಿಕ್ಲಿಕ್​ ಎಸ್​ಬಿಐ ಕಾರ್ಡ್​ ಇದನ್ನು ಒಳಗೊಂಡಿದೆ.

Share with Friends
author avatar
News Desk