Health | ಆರೋಗ್ಯLatestTop Storiesಬೆಂಗಳೂರು-Bengaluru

ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ದರಕ್ಕೆ ಔಷಧ ಮಾರಾಟ: ಕೇಂದ್ರಕ್ಕೆ ಪತ್ರ

ಬೆಂಗಳೂರು.ಅ.1- ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ಣಾಯಕ ಹಾಗೂ ದುಬಾರಿ ಔಷಧಿಗಳನ್ನು ಅತಿಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದ್ದು,ಈ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪತ್ರ ಬರೆಯಲಾಗಿದೆ.
ಆಹಾರ, ಸುರಕ್ಷತೆ ಮತ್ತು ಔಷಧ ಆಡಳಿತ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ, ಕೆಲವು ಖಾಸಗಿ ಆಸ್ಪತ್ರೆಗಳು ಹಾಗೂ ಫಾರ್ಮಸಿಗಳಲ್ಲಿ ಔಷಧಗಳ ಖರೀದಿ ಅಥವಾ ಲ್ಯಾಂಡಿಂಗ್ ದರ ಮತ್ತು ರೋಗಿಗಳಿಗೆ ವಿಧಿಸಲಾಗುತ್ತಿರುವ ದರದ ನಡುವೆ ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಪಿಸಲಾಗಿದೆ.

ಆಸ್ಪತ್ರೆಗಳು ಮತ್ತು ಫಾರ್ಮಸಿಗಳು ಔಷಧಗಳ ಲ್ಯಾಂಡಿಂಗ್ ದರದ ಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತಾಗಬೇಕು. ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿನ ಔಷಧ ಮಾರಾಟಕ್ಕೆ ನಿಯಂತ್ರಣ ತರಲು ಕೇಂದ್ರ ಸರ್ಕಾರ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.ತಪಾಸಣೆ ವೇಳೆ ಗಮನಕ್ಕೆ ಬಂದಿರುವ ಕೆಲವು ಔಷಧ ಹಾಗೂ ವೈದ್ಯಕೀಯ ಸಾಮಗ್ರಿಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

ಈ ದರಗಳಲ್ಲಿ ಕಂಡುಬರುವ ಭಾರಿ ವ್ಯತ್ಯಾಸದಿಂದ ರೋಗಿಗಳು ಮತ್ತು ಅವರ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಹೀಗಾಗಿ ಖಾಸಗಿ ಆಸ್ಪತ್ರೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಫಾರ್ಮಸಿಗಳಲ್ಲಿ ಔಷಧಗಳ ಖರೀದಿ ದರ, ಲ್ಯಾಂಡಿಂಗ್ ದರ ಹಾಗೂ ರೋಗಿಗಳಿಗೆ ವಿಧಿಸುವ ಮಾರಾಟ ದರದಲ್ಲಿ ಪಾರದರ್ಶಕತೆ ತರಬೇಕು.

ರೋಗಿಗಳಿಂದ ಅತಿಯಾದ ವಸೂಲಿ ನಡೆಯದಂತೆ ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.ಖಾಸಗಿ ಆಸ್ಪತ್ರೆಗಳಲ್ಲಿನ ಔಷಧ ಮಾರಾಟ ಮತ್ತು ದರ ನಿಗದಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನು ರೂಪಿಸಿ, ರೋಗಿಗಳ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂಬುದು ಪತ್ರದ ಪ್ರಮುಖ ಬೇಡಿಕೆಯಾಗಿದೆ.

Share with Friends
author avatar
Digital Desk