LatestTop Storiesಜಿಲ್ಲಾ ಸುದ್ದಿಗಳು | District Newsಬೆಂಗಳೂರು-Bengaluru

ರಾಪಿಡೋ ಪಾರ್ಟನರ್ ವಿರುದ್ಧ ಅಸಭ್ಯ ವರ್ತನೆ ಆರೋಪ

ಬೆಂಗಳೂರು,ಸೆ.27 – ರಾಪಿಡೋ ಪಾರ್ಟನರ್ ಶಿವ ರೆಡ್ಡಿ ಎಂಬಾತನ ವಿರುದ್ಧ ಮಹಿಳೆಯೊಬ್ಬರು ಅಸಭ್ಯ ವರ್ತನೆ ಆರೋಪ ಮಾಡಿದ್ದಾರೆ.

ಮನೆಯ ಗೇಟ್ ಬಳಿ ಮೂತ್ರ ವಿಸರ್ಜನೆ ಮಾಡಿ ಅಸಭ್ಯವಾಗಿ ವರ್ತಿಸಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಟ್ಯಾಗ್ ಮಾಡಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ, ಗೇಟ್ ಬಳಿ ಮೂತ್ರ ವಿಸರ್ಜನೆ ಮಾಡಿರುವುದಾಗಿ ಶಿವ ರೆಡ್ಡಿ ಆಡಿಯೋ ನೋಟ್ ಕಳುಹಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.ಆ ಆಡಿಯೋ ನೋಟ್‌ನ್ನು ಮೀಡಿಯಾ ಪೋಸ್ಟ್ ಮಾಡಿ, ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಬಾಟಲ್‌ನಲ್ಲಿ ಮೂತ್ರ ತಂದು ಗೇಟ್‌ಗೆ ಚೆಲ್ಲಿರುವುದಾಗಿ ಆಡಿಯೋ ನೋಟ್‌ನಲ್ಲಿ ಹೇಳಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳೆ ಮನವಿ ಮಾಡಿದ್ದಾರೆ.

Share with Friends
author avatar
Digital Desk