LatestTop Storiesಕೋಲಾರ-Kolara

ಕಲ್ಲು ತುಂಬಿದ್ದ ಲಾರಿ ಪಲ್ಟಿ, ಚಾಲಕ ಸಾ*

ಕೋಲಾರ.ಸೆ.27- ಕಲ್ಲು ಕ್ವಾರಿ ಬಳಿ ಕಲ್ಲು ತುಂಬಿದ್ದ ಲಾರಿ ಪಲ್ಟಿಯಾಗಿ ಚಾಲಕ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ನರಸಾಪುರ ಸಮೀಪದ ಕೆ.ಬಿ. ಹೊಸಹಳ್ಳಿ ಗ್ರಾಮದ ನಡೆದಿದೆ.

ಚಾಕ್ಲೇಟ್ ಬಾಗಲೂರು ಗ್ರಾಮದ ರಮೇಶ್ (50) ಮೃತಪಟ್ಟಿದ್ದು,ಕ್ವಾರಿಯಿಂದ ಜಲ್ಲಿ ಕ್ರಷರ್‌ಗೆ ಕಲ್ಲು ಸಾಗಿಸುತ್ತಿದ್ದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಲಾರಿಯಲ್ಲಿ ನಿಯಮಬಾಹಿರವಾಗಿ ಅತಿಯಾದ ಪ್ರಮಾಣದಲ್ಲಿ ಕಲ್ಲು ತುಂಬಿ ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವೇಮಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share with Friends
author avatar
Digital Desk