LatestTop Storiesಬೆಂಗಳೂರು-Bengaluruರಾಜಕೀಯ | Politics

ಸಿಎಂ ಡಿಕೆಶಿ ಹೇಳಿಕೆಗೆ ಬಿಜೆಪಿ-ಜೆಡಿಎಸ್ ಕೆಂಡಾಮಂಡಲ..!

ಬೆಂಗಳೂರು.ಸೆ.26-ಬೆಂಗಳೂರಿಗೆ ಬಂದ ಅನೇಕ ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರೋದೀಗ ಭಾರಿ ಕುತೂಹಲ ಮೂಡಿಸಿದೆ.ಆ ಶಾಸಕರು ಯಾರೆಂಬ ಪ್ರಶ್ನೆ ಉದ್ಭವಿಸಿವೆ. ಪ್ರಸ್ತುತ ಸಿಎಂ ಹೇಳಿಕೆ ಬಗ್ಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಎರಡೆರಡು ಮದುವೆ ಆಗಿರುವ ಶಾಸಕರ ಹೆಸರುಗಳನ್ನು ದಯವಿಟ್ಟು ಬಹಿರಂಗ ಮಾಡಿ ಎಂದು ಆಗ್ರಹಿಸಿದ್ದಾರೆ.

ಇಲ್ಲದಿದ್ದರೆ ರಾಜ್ಯದ ಜನತೆ ಎಲ್ಲರನ್ನೂ ಅಸಹ್ಯ ದೃಷ್ಟಿಯಿಂದ ಕಾಣುವ ಅಥವಾ ಅಪಹಾಸ್ಯ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯಿಂದ ಶಾಸಕರ ಮನೆಗೆ ಬೆಂಕಿ ಬಿದ್ದಂತಾಗಿದೆ. ಎಲ್ಲ ಶಾಸಕರ ಮೇಲೂ ಅನುಮಾನ ಪಡುವಂತಾಗಿದೆ. ಈ ಅನುಮಾನಕ್ಕೆ ಮುಖ್ಯಮಂತ್ರಿಗಳೇ ಪರಿಹಾರ ಸೂಚಿಸಬೇಕು. ಯಾರು ಯಾರು ಎರಡೆರಡು ಮದುವೆಯಾಗಿದ್ದಾರೆ ಎಂಬುದರ ಪಟ್ಟಿಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಸುರೇಶ್ ಕುಮಾರ್ ಮಾತನಾಡಿ,ಮುಖ್ಯಮಂತ್ರಿ ನೀಡಿರುವ ಉತ್ತರ ಲಘುವಾಗಿಯೇ ಇರಬಹುದು.ಆದರೆ ಈ ರೀತಿಯ ಉತ್ತರ ವಿಧಾನಸಭಾ ವೇದಿಕೆಯಿಂದ ಮಾತನಾಡುವುದು ಯಾರಿಗೂ ಘನತೆ ತರುವ ವಿಚಾರವಲ್ಲ.ನಾಡಿನ ಮುಖ್ಯಮಂತ್ರಿ ಈ ರೀತಿ ಹೇಳಬಾರದಿತ್ತು.ಇದು ಯಾರಿಗೂ ಗೌರವ ತರುವ ಸಂಗತಿಯಲ್ಲ. ಸದನದ ಗಾಂಭೀರ್ಯತೆಗೆ ತಕ್ಕ ಸಂಗತಿಯಲ್ಲ. ನಾನು ಸದನದಲ್ಲಿ ಇದ್ದಿದ್ದರೆ ಕೂಡಲೇ ಪ್ರತಿಕ್ರಿಯಿಸುತ್ತಿದ್ದೆ ಎಂದು ತಿಳಿಸಿದ್ದಾರೆ.

ಈಗ ಮುಖ್ಯಮಂತ್ರಿಗಳು ಈ ರೀತಿ ಹೇಳಬಾರದನ್ನು ಹೇಳಿಯಾಗಿದೆ.ಈಗ ಇದು ಸಾರ್ವಜನಿಕರೆಲ್ಲರ ಕೆಟ್ಟ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಜನರ ಮುಂದೆ ಇಡಲು ಶ್ವೇತಪತ್ರ ಹೊರಡಿಸುತ್ತೀರೋ ಇಲ್ಲವೋ ನನಗೆ ಗೊತ್ತಾಗುತ್ತಿಲ್ಲ. ಆದರೆ ಎರಡೆರಡು ಮದುವೆ (ಅಥವಾ ಇನ್ನೂ ಹೆಚ್ಚು) ಆಗಿರುವ, ಎರಡೆರಡು ಮನೆ ಇಟ್ಟುಕೊಂಡಿರುವ ಶಾಸಕರ ಹೆಸರರೂಗಳನ್ನು ದಯವಿಟ್ಟು ಬಹಿರಂಗ ಮಾಡಿ.

ಇಲ್ಲದಿದ್ದರೆ ರಾಜ್ಯದ ಜನತೆ ಎಲ್ಲರನ್ನೂ ಅಸಹ್ಯ ದೃಷ್ಟಿಯಿಂದ ಕಾಣುವ ಅಥವಾ ಅಪಹಾಸ್ಯ ಮಾಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸಿದ್ದು, ಸಿಎಂ ಸ್ಥಾನದಲ್ಲಿರುವವರು ಇಂತಹ ಬಾಲಿಶ ಹಾಗೂ ಜವಾಬ್ದಾರಿಯಿಲ್ಲದ ಹೇಳಿಕೆಗಳನ್ನು ನೀಡಬಾರದು ಎಂದು ತಿರುಗೇಟು ನೀಡಿದ್ದಾರೆ.

Share with Friends
author avatar
Digital Desk