
ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ಹುಲಿರಾಯನ ದರ್ಶನ
ಮೈಸೂರು.ಸೆ.22- ನಾಗರಹೊಳೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬೆಳ್ಳಂಬೆಳಗ್ಗೆ ಹುಲಿಯ ದರ್ಶನವಾಗಿದ್ದು, ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎಚ್.ಡಿ. ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಮಾರ್ಗದಲ್ಲಿ ಹುಲಿಯೊಂದು ರಸ್ತೆ ಬದಿಯ ಗುಂಡಿಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಹಾಯಾಗಿ ಮಲಗಿರುವುದು ಪ್ರವಾಸಿಗರ ಕಣ್ಣಿಗೆ ಬಿದ್ದಿದೆ. ಬಳಿಕ ಅದೇ ಸ್ಥಳದಲ್ಲಿ ನೀರು ಕುಡಿಯುತ್ತ ಪ್ರವಾಸಿಗರ ಕ್ಯಾಮೆರಾಗಳಿಗೆ ಹುಲಿ ಪೋಸ್ ನೀಡಿದೆ.
ಹುಲಿಯನ್ನು ಅತ್ಯಂತ ಸಮೀಪದಿಂದ ಕಂಡ ಪ್ರವಾಸಿಗರು ಸಂತಸಗೊಂಡಿದ್ದು , ಅದರ ಚಲನವಲನಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.
ಸಫಾರಿ ವೇಳೆ ಕಂಡುಬಂದ ಈ ಅದ್ಭುತ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
