
ಸಾಸ್ವೇಹಳ್ಳಿ ಏತ ನೀರಾವರಿ: ಕೆರೆಗಳಿಗೆ ನೀರು ಹರಿಸದಿರುವುದಕ್ಕೆ ರೈತರ ಆಕ್ರೋಶ
ಚನ್ನಗಿರಿ: ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ಹರಿಸದಿರುವುದನ್ನು ಖಂಡಿಸಿ ಕೆ.ಗಾಣದಕಟ್ಟೆ ಗ್ರಾಮದಲ್ಲಿ ವಿವಿಧ ಗ್ರಾಮಗಳ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ತಕ್ಷಣ ನೀರು ಹರಿಸುವಂತೆ ರೈತರ ಆಗ್ರಹ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪದಿಂದ ಕೆರೆಗಳಿಗೆ ನೀರು ಬಾರದಿರುವುದರಿಂದ ಕೃಷಿ ಹಾಗೂ ಅಂತರ್ಜಲದ ಮೇಲೆ ಪರಿಣಾಮ ಬೀರುವ ಆತಂಕ ಉಂಟಾಗಿದೆ.

ಜೋಳದಾಳ್, ಗೋಪನಾಳ್, ಸಾರಥಿ, ಮಾವಿನಕಟ್ಟೆ, ಮುದಿಗೆರೆ, ಎರೇಹಳ್ಳಿ, ಹರೋನಹಳ್ಳಿ, ಅಜ್ಜಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರ ಪ್ರತಿಭಟನೆ ನಡೆಸಿದ್ದಾರೆ.
ಯೋಜನೆಯ ನೀರು ಹಂಚಿಕೆ ವ್ಯವಸ್ಥೆಯನ್ನು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಒತ್ತಾಯಮಾಡಿ
ಪ್ರತಿಭಟನಾಕಾರರು ಚನ್ನಗಿರಿ ಗ್ರೇಡ್–2 ತಹಶೀಲ್ದಾರ್ ರುಕ್ಮಿಣಿಬಾಯಿ ಅವರಿಗೆ ಮನವಿ ಸಲ್ಲಿಸಿದರು.
ಕೆರೆಗಳಿಗೆ ಶೀಘ್ರ ನೀರು ಹರಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿ ನೀರಾವರಿ ಯೋಜನೆಯ ಉದ್ದೇಶ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದು ರೈತರ ಒತ್ತಾಯ ಮಾಡಿದ್ದಾರೆ.
