
Asian Games 2026: ಭಾರತ vs ಜಪಾನ್ ಐತಿಹಾಸಿಕ ಟಿ20 ಪಂದ್ಯ! ಯಾವಾಗ, ಎಲ್ಲಿ ವೀಕ್ಷಿಸಬೇಕು? ಇಲ್ಲಿದೆ ಸಂಪೂರ್ಣ ವಿವರ

ಬೆಳಗಿನ ಸುದ್ದಿ | ಕ್ರಿಕೆಟ್ ಡೆಸ್ಕ್:
2026ರ ಏಷ್ಯನ್ ಗೇಮ್ಸ್‌ಗೆ ಚಾಲನೆ ಸಿಗುವುದಕ್ಕೂ ಮುನ್ನವೇ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ಸಿಗಲಿದೆ. ವಿಶ್ವಚಾಂಪಿಯನ್ ಭಾರತ ಹಾಗೂ ಆತಿಥೇಯ ಜಪಾನ್ ಪುರುಷರ ಕ್ರಿಕೆಟ್ ತಂಡಗಳ ನಡುವೆ ಐತಿಹಾಸಿಕ ಏಕೈಕ ಟಿ20 (T20I) ಪಂದ್ಯ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಭಾರತ ಮತ್ತು ಜಪಾನ್ ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಸ್ನೇಹಸಂಬಂಧದ 75 ವರ್ಷಗಳ ನೆನಪು
ಈ ವಿಶೇಷ ಪಂದ್ಯಕ್ಕೂ ಏಷ್ಯನ್ ಗೇಮ್ಸ್‌ನ ಪದಕದ ಪಟ್ಟಿಗೂ ಯಾವುದೇ ಸಂಬಂಧವಿರುವುದಿಲ್ಲ. ಭಾರತ ಮತ್ತು ಜಪಾನ್ ದೇಶಗಳ ನಡುವಿನ 75 ವರ್ಷಗಳ ರಾಜತಾಂತ್ರಿಕ ಹಾಗೂ ಸ್ನೇಹ ಸಂಬಂಧದ ನೆನಪಿಗಾಗಿ ಈ ಪ್ರತ್ಯೇಕ ಪಂದ್ಯವನ್ನು ಆಯೋಜಿಸಲಾಗಿದೆ. ಕ್ರಿಕೆಟ್ ಜಗತ್ತಿನಲ್ಲಿ ಬೆಳೆಯುತ್ತಿರುವ ಜಪಾನ್ ತಂಡಕ್ಕೆ, ವಿಶ್ವವಿಜೇತ ಭಾರತದ ವಿರುದ್ಧ ಆಡುವುದು ಒಂದು ಐತಿಹಾಸಿಕ ಕ್ಷಣವಾಗಿದೆ.
ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾ!
ಪ್ರಸ್ತುತ ಏಷ್ಯನ್ ಗೇಮ್ಸ್‌ನ ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ, ಇತ್ತೀಚೆಗಷ್ಟೇ ತವರಲ್ಲಿ ಅಫ್ಘಾನಿಸ್ತಾನ ವಿರುದ್ಧ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡು ಜಯದ ಹುಮ್ಮಸ್ಸಿನಲ್ಲಿದೆ. ಅಲ್ಲದೆ, ಟಿ20 ವಿಶ್ವಕಪ್ ಹಾಗೂ ಏಷ್ಯಾ ಕಪ್ ಗೆದ್ದುಬಂದಿರುವ ಬಲಶಾಲಿ ಭಾರತ ತಂಡವೇ ಈ ಪಂದ್ಯದಲ್ಲೂ ಗೆಲ್ಲುವ ನೆಚ್ಚಿನ (Favorite) ತಂಡವಾಗಿ ಕಣಕ್ಕಿಳಿಯಲಿದೆ. ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಮುಖ್ಯ ತಂಡಗಳೇ ಈ ವಿಶೇಷ ಪಂದ್ಯದಲ್ಲೂ ಭಾಗವಹಿಸಲಿವೆ.
ಪಂದ್ಯದ ಸಂಪೂರ್ಣ ವಿವರ ಹಾಗೂ ನೇರ ಪ್ರಸಾರ:
ಪಂದ್ಯ:ಭಾರತ vs ಜಪಾನ್ (ಏಕೈಕ T20I)
ದಿನಾಂಕ: ಸೆಪ್ಟೆಂಬರ್ 22, 2026
ಸ್ಥಳ:ಸಾನೊ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ಜಪಾನ್
ಸಮಯ:ಬೆಳಿಗ್ಗೆ 9:30 ರಿಂದ ಪಂದ್ಯ ಆರಂಭ (ಟಾಸ್: ಬೆಳಿಗ್ಗೆ 9:00 ಗಂಟೆಗೆ
ಟಿವಿ ನೇರ ಪ್ರಸಾರ:ಸ್ಟಾರ್ ಸ್ಪೋರ್ಟ್ಸ್ 1 ಹಾಗೂ ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ
ಲೈವ್ ಸ್ಟ್ರೀಮಿಂಗ್:ಫ್ಯಾನ್‌ಕೋಡ್ (FanCode)
ಇನ್ನಷ್ಟು ಇತ್ತೀಚಿನ ಸುದ್ದಿಗಳು ಹಾಗೂ ತಾಜಾ ಅಪ್‌ಡೇಟ್‌ಗಳಿಗಾಗಿ ‘ಸಂಪೂರ್ಣ ನ್ಯೂಸ್ ಡಿಜಿಟಲ್’ ಫಾಲೋ ಮಾಡಿ.ಮೊಬೈಲ್ ಆಪ್
