
“ಹಳಿಗೆ ಬ್ರೇಕ್… ಸಬ್‌ವೇಗೆ ಚಾಲನೆ!”
ತುಮಕೂರು:ಇಂದು ಪ್ರಧಾನಿ ನರೇಂದ್ರ ಮೋದಿಯ ಹುಟ್ಟುಹಬ್ಬ ಸಂಭ್ರಮ ಆಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಗೆ ಶುಭ ಕೋರಿದ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ
ನೂತನ ಸಬ್ ವೇ ಕೆಳ ಸೇತುವೆ ಲೋಕಾರ್ಪಣೆಗೆ ಚಾಲನೆ ನೀಡಿದ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ಭೀಮಸಂದ್ರ ಗೇಟ್ ಬಳಿ ಇದ್ದ ಹಳೆಯ ಎಲ್ ಸಿ ಸಂಖ್ಯೆ 43ರ ಬದಲಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ನೂತನ ಸಬ್ ವೇ ಲೋಕಾರ್ಪಣೆಗೊಳಿಸಿದ್ದಾರೆ..
ಬಡ್ಡಿಹಳ್ಳಿ ಗೇಟ್ ನ ಎಲ್ಸಿ ಸಂಖ್ಯೆ 38ರ ಬದಲಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ರಸ್ತೆ ಮೇಲ್ಬಾಗದ ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿಬಿ ಜ್ಯೋತಿ ಗಣೇಶ್, ಬೆಂಗಳೂರು ವಿಭಾಗದ ರೈಲ್ವೆ ವ್ಯವಸ್ಥಾಪಕರು ಮತ್ತು ಹಿರಿಯ ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದಾರೆ ತುಮಕೂರು ಭಾಗದಲ್ಲಿ ರೈಲ್ವೆ ಹಳಿ ದಾಟುವಾಗ ಸಾರ್ವಜನಿಕರಿಗೆ ಎದುರಾಗುತ್ತಿದ್ದ ಸಮಸ್ಯೆ ಬಗೆಹರಿಸಿದ್ದಾರೆ.
ಸಂಚಾರದಟ್ಟಣೆ ಮತ್ತು ಸುರಕ್ಷತೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ತಿಳಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮದಲ್ಲಿ ಹಾಡಿ ಹೊಗಳಿದ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ.
ವಿಶ್ವದ ಮೂಲೆ ಮೂಲೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ತುಮಕೂರಿನ ಪರಿವರ್ತನೆಗೆ ಹಾಗೂ ಅಭಿವೃದ್ಧಿಗೆ ಬದಲಾವಣೆ ಕಾಣುವುದಕ್ಕೆ ನಾಗರಿಕರು ಕಾತುರದಿಂದ ಕಾಯುತ್ತಿದ್ದಾರೆ ಉಳಿದಿರುವ ಕೆಲಸಗಳನ್ನು ಶಾಸಕರ ಗಮನಕ್ಕೆ ತನ್ನಿ ಅಧಿಕಾರಿಗಳು ಶ್ರದ್ದೆವಹಿಸಿ ಈ ಕಾರ್ಯಕ್ರಮ ಮಾಡಿದ್ದೀರಿ
ಅಧಿಕಾರಿಗಳಿಗೆ ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸಿದ ರೈಲ್ವೆ ಸಚಿವ ವಿ ಸೋಮಣ್ಣ ಎಲ್ಲರೂ ಒಟ್ಟಾಗಿ ಮೂರ್ನಾಲ್ಕು ಗಂಟೆಗಳ ಕಾಲ ಬೆರೆಯೋಣ ಎಂದಿದ್ದಾರೆ..
