
ಗಣೇಶ ಮೂರ್ತಿ ತರುತ್ತಿದ್ದ ಲಾರಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ –
ರಾಯಚೂರು:ಗಣೇಶ ಮೂರ್ತಿ ತರುತ್ತಿದ್ದ ಲಾರಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ. ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವು ಸಂಭವಿಸಿದ ದುರ್ಘಟನೆ ನಡೆದಿದೆ.ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಪ್ರೇಮ್ ಕುಮಾರ್ (27) ಮೃತ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ.ಗಣೇಶ ಮೂರ್ತಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ತಂತಿ ತುಂಡಾಗುತ್ತಿದ್ದಂತೆ ಹೊರಗೆ ಜಿಗಿದು ಪಾರಾದ ಉಳಿದ ಯುವಕರು.
ಲಾರಿಯಲ್ಲಿ ಮಲಗಿದ್ದ ಪ್ರೇಮ್ ಕುಮಾರ್ ಸಾವು ಸಂಭವಿಸಿದೆ. ಲಾರಿ ಮೇಲ್ಭಾಗದಲ್ಲಿ ಮಲಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
25 ಕ್ವಿಂಟಾಲ್ ತೂಕದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತರುತ್ತಿದ್ದ ವೇಳೆ ಅವಘಡ ಸಂಭವಿಸಿದೆ.ಘಟನೆಯಲ್ಲಿ ರಸ್ತೆಗೆ ಉರುಳಿಬಿದ್ದ ಗಣೇಶ ಮೂರ್ತಿ ತೆರವು ಮಾಡಲಾಗಿದೆ.
ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮರಣೋತ್ತರ ಪರೀಕ್ಷೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ.
