LatestTop Storiesಜಿಲ್ಲಾ ಸುದ್ದಿಗಳು | District Newsರಾಯಚೂರು

ಪ್ರಜಾ ಸೇವಾ ಅಭಿಯಾನದ ಸಭೆಯಲ್ಲಿಯೇ ಅರೆಬೆತ್ತಲೆಯಾಗಿ ಧರಣಿಗೆ ಮುಂದಾದ ವ್ಯಕ್ತಿ

ರಾಯಚೂರು: ಲಿಂಗಸುಗೂರ ತಾಲೂಕು ಸರಕಾರ ಸಾರ್ವಜನಿಕರ ಸಮಸ್ಯೆ ಗಳಿಗೆ ತ್ವರಿತವಾಗಿ ಪರಿಹಾರ ಸಿಗಲಿ ಎನ್ನುವ ಉದ್ದೇಶದಿಂದಾಗಿ ನೂತನವಾಗಿ ಜಾರಿಗೆ ತಂದಿರುವ ಪ್ರಜಾಸೇವಾ ಇಲಾಖೆಯ ಅಭಿಯಾನ ಕಾರ್ಯಕ್ರಮದ ಮೊದಲ ದಿನವೇ ವ್ಯಕ್ತಿ ಒಬ್ಬರು ತಮಗೆ ಪುರಸಭೆಯಿಂದ ಅನ್ಯಾಯವಾಗಿದೆ ಪರಿಹಾರ ಸಿಕ್ಕಿರುವುದಿಲ್ಲವೆಂದು ಆರೋಪಿಸಿ ಅರಬೆತ್ತಲೆ ಪ್ರತಿಭಟನೆಗೆ ಮುಂದಾದ ಘಟನೆ ಶನಿವಾರ ಜರುಗಿತು.

ಶ್ರೀನಿವಾಸ್ ತಂದೆ ಕಿಶನ್ ರಾವ್ ಸಾ, ಹಿರೇ ಹೆಸರೂರ ಎಂಬುವವರು ಲಿಂಗಸಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ 7ನೇ ವಾರ್ಡಿನಲ್ಲಿ ತಾವು ಖರೀದಿಸಿದ ಪ್ಲಾಟನ್ನು ಬೇರೆಯವರ ಹೆಸರಿಗೆ ನೋಂದಾಯಿಸಲಾಗಿದ್ದು .

ಈ ಕುರಿತಂತೆ ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ನನ್ನ ಮನವಿಗೆ ಇಲ್ಲಿಯವರೆಗೂ ಪುರಸಭೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ದಾಖಲೆಗಳ ಸಮೇತ ಪ್ರಜಾ ಸೇವಾ ಇಲಾಖೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಅರಬೆತ್ತಲೆಯಾಗಿ ಪ್ರತಿಭಟನೆಗೆ ಮುಂದಾದರು.

ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸಹಾಯಕ ಆಯುಕ್ತರು ತಕ್ಷಣವೇ ಪ್ರತಿಭಟನೆಗೆ ಮುಂದಾದ ವ್ಯಕ್ತಿಗೆ ಸಮಜಾಯಿಸಿ ನೀಡಿ ತಕ್ಷಣವೇ ನೀವು ಪ್ರಜಾ ಸೇವಾ ಇಲಾಖೆಗೆ ನಿಮ್ಮ ಸಮಸ್ಯೆಗೆ ಸಂಬಂಧಿಸಿದಂತೆ ದೂರು ನೀಡಿ, ನಂತರ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ಹೇಳಿದಾಗ ಆ ವ್ಯಕ್ತಿ ಪ್ರತಿಭಟನೆಯಿಂದ ಹಿಂದೆ ಸರಿದರು.

Share with Friends
author avatar
Digital Desk