LatestTop Storiesಜಿಲ್ಲಾ ಸುದ್ದಿಗಳು | District News

ಅರಣ್ಯ ಹಕ್ಕುಪತ್ರಕ್ಕೆ 155 ರೈತರ ಅರ್ಜಿ: ದಾಖಲೆ ಪರಿಶೀಲನೆಗೆ ಅಧಿಕಾರಿಗಳ ಭರವಸೆ

ಚನ್ನಗಿರಿ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚೆನ್ನೇಶ್‌ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರುರಾಜಪುರ ಗ್ರಾಮದಲ್ಲಿ ಅರಣ್ಯ ಹಕ್ಕು ಸಮಿತಿ ಗ್ರಾಮಸಭೆ ನಡೆಯಿತು.

ಅರಣ್ಯ ಹಕ್ಕುಪತ್ರಕ್ಕಾಗಿ ಒಟ್ಟು 155 ರೈತರು ಅರ್ಜಿ ಸಲ್ಲಿಸಿದ್ದಾರೆ. ಹಾಗೂ ರೈತರ ಅರ್ಜಿಗಳು ಹಾಗೂ ಅಗತ್ಯ ದಾಖಲೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಅರಣ್ಯ ಹಕ್ಕುಪತ್ರಕ್ಕೆ 155 ರೈತರ ಅರ್ಜಿ ದಾಖಲೆ ಪರಿಶೀಲನೆಗೆ ಅಧಿಕಾರಿಗಳ ಭರವಸೆ

ಹಲವು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಹಕ್ಕುಪತ್ರಕ್ಕಾಗಿ ಮನವಿ ಮಾಡಿದರು. ಮತ್ತು ದಾಖಲೆಗಳ ಕೊರತೆ ಹಾಗೂ ವ್ಯತ್ಯಾಸಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅರ್ಹ ರೈತರ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಪಿಡಿಒ ಪ್ರಸನ್ನ ಕುಮಾರ್, ಟಿಟಿಡಬ್ಲ್ಯುಒ ಸಹಾಯಕ ಗ್ರೇಡ್–2 ರುದ್ರೇಶ್, ಅರಣ್ಯ ಇಲಾಖೆ ಅಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

Share with Friends
author avatar
Digital Desk