LatestTop Storiesತುಮಕೂರು-Tumakuru

100 ವರ್ಷಗಳ ಸರ್ಕಾರಿ ಶಾಲೆಗೆ ಕಂಟಕ?ಖಾಸಗಿ ಸಂಸ್ಥೆ ವಿರುದ್ಧ ದಲಿತರ ಆಕ್ರೋಶ!

ತುಮಕೂರು: ದಲಿತ ಸೇನೆ ರಾಮ್ ವಿಲಾಸ್ ಸಂಘಟನೆ ಹಾಗೂ ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಸಂಘಟನೆಗಳ ವತಿಯಿಂದ ಸರ್ಕಾರಿ ಶಾಲೆ ಉಳಿವಿಗಾಗಿ ಪ್ರತಿಭಟನೆ ನಡೆಸಿದ್ದಾರೆ.

ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸರ್ಕಾರಿ ಶಾಲೆ ಜಾಗವನ್ನು ಸರ್ಕಾರಿ ಶಾಲೆಗೆ ಉಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.ಈ ಕುರಿತು ದಲಿತ ಸೇನೆ ರಾಮ್ ವಿಲಾಸ ಸಂಘಟನೆ ತುಮಕೂರು ಜಿಲ್ಲಾ ಅಧ್ಯಕ್ಷರ ಸಿದ್ದರಾಜುರವರು ಮಾತನಾಡಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಗಾಂಧಿನಗರ ಸರ್ಕಾರಿ ಮಾದರಿ ಶಾಲೆಗೆ ಸುಮಾರು 100 ವರ್ಷಗಳ ಇತಿಹಾಸವಿದೆ,ಸುಮಾರು ವರ್ಷಗಳಿಂದ ಬಡ ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಹಾಗೂ ಬಡ ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳು, ಹಿಂದುಳಿದ ಅಲ್ಪಸಂಖ್ಯಾತರ ಮಕ್ಕಳು ಅತಿ ಹೆಚ್ಚಿನದಾಗಿ ವಿದ್ಯಾಭ್ಯಾಸ ಮಾಡಿದ್ದಾರೆ.

ಈ ಶಾಲೆಗೆ ತನ್ನದೇ ಆದ ಇತಿಹಾಸವಿದೆ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಸಂಘ ಸಂಸ್ಥೆಯವರು ತಮ್ಮ ಸ್ವಾರ್ಥಕ್ಕಾಗಿ ಸರ್ಕಾರಿ ಶಾಲೆಯ ಜಾಗವನ್ನು ಕಬಳಿಸಲು ಒಂದಾಗಿದ್ದಾರೆ ಎಂದು ಆರೋಪಿಸಿದರು.ಮಾನಸ ಬುದ್ಧಿಮಾಂದ್ಯ ಸಂಸ್ಥೆಗೆ ಶಾಲೆಯ ಜಾಗವನ್ನು ಖಾತೆ ಮಾಡಲು ತುಮಕೂರು ಮಹಾನಗರ ಪಾಲಿಕೆಯವರು ಮುಂದಾಗಿದ್ದಾರೆ,

ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರು ಸಹ ಅಂಗವಿಕಲ ಮಕ್ಕಳು ವಿಕಲಚೇತನ ಮಕ್ಕಳಿದ್ದಾರೆ,ಮಾನಸ ಬುದ್ಧಿಮಾಂದ್ಯ ಸಂಸ್ಥೆಯವರು ಏಕಾಏಕಿ ಸರ್ಕಾರಿ ಶಾಲೆಯ ಬಳಿ ಹೋಗಿ ನಿಮ್ಮ ಮಕ್ಕಳನ್ನು ಆಚೆ ಕಳಿಸಿದ್ದಾರೆ.

ನಿಮ್ಮ ದಾಖಲಾತಿಗಳನ್ನು ಬೇರೆ ಕಡೆ ಸ್ಥಳಾಂತರಿಸಿ ನಾವು ಬಿಲ್ಡಿಂಗ್ ಧ್ವಂಸಗೊಳಿಸಬೇಕು,ನಮ್ಮ ಸಂಸ್ಥೆಗೆ ಈ ಜಾಗ ಆಗಿದೆ ಎಂದು ದಮ್ಕಿ ಹಾಕುತ್ತಿದ್ದಾರೆ?

ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಾನಗರ ಪಾಲಿಕೆಯವರಿಗೆ ಸರ್ಕಾರಿ ಶಾಲೆಯ ಜಾಗವನ್ನು ಅದೇ ಶಾಲೆಯ ಹೆಸರಿಗೆ ಖಾತೆ ಮಾಡಲು ಸುಮಾರು ಬಾರಿ ಅರ್ಜಿ ಸಲ್ಲಿಸಿದರು ಪ್ರಯೋಜನವಾಗಿಲ್ಲ!

12 ವರ್ಷಗಳ ಕಾಲ ಶಾಲಾ ಕಾಲೇಜು ಅನುಭವದಲ್ಲಿದ್ದರೆ ಜಾಗವನ್ನು ಅದೇ ಶಾಲಾ ಕಾಲೇಜಿಗೆ ಖಾತೆ ಮಾಡಬೇಕು ಎಂಬ ಆದೇಶವಿದೆ,ಆದರೂ ಮಹಾನಗರ ಪಾಲಿಕೆಯವರು ಖಾಸಗಿ ಸಂಸ್ಥೆಯವರೊಂದಿಗೆ ಶಾಮಿಲ್ ಆಗಿದ್ದಾರೆ

ಸರ್ಕಾರಿ ಶಾಲೆಯ ಹೆಸರಿಗೆ ಖಾತೆ ಮಾಡುತ್ತಿಲ್ಲ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್ ಕೆ ನಿಧ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ,ಈ ವಿಷಯದ ಕುರಿತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಇಂದ್ರಕುಮಾರ್ ಮಾತನಾಡಿದ್ದಾರೆ.

ಮಕ್ಕಳನ್ನು ಈ ಶಾಲೆಯಲ್ಲಿ ವ್ಯಾಸಂಗ ಮಾಡಲು ಅವಕಾಶ ಕೊಡದೆ ಹೊರದಬ್ಬಲು ಸಂಚು ರೂಪಿಸಿರುವ ಖಾಸಗಿ ಸಂಘ ಸಂಸ್ಥೆಯವರ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳಬೇಕು.ತುಮಕೂರು ಮಹಾನಗರ ಪಾಲಿಕೆಯವರು ಇಂತಹ ಭ್ರಷ್ಟರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಮಾನಸ ಬುದ್ದಿ ಮಾಂದ್ಯ ಖಾಸಗಿ ಸಂಸ್ಥೆಯವರಿಗೆ ಯಾವುದೇ ಕಾರಣಕ್ಕೂ ಈ ಶಾಲೆಯನ್ನು ಬಿಟ್ಟುಕೊಡಬಾರದು,ಸರ್ಕಾರಿ ಶಾಲೆಯನ್ನು ಉಳಿಸಬೇಕಾದ ಕಾರ್ಯವನ್ನು ಶಿಕ್ಷಣ ಇಲಾಖೆ ಜಿಲ್ಲಾಡಳಿತ ಮತ್ತು ಪಾಲಿಕೆ ಮಾಡಬೇಕು?ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Share with Friends
author avatar
Digital Desk