
ದೇಶದ ಎಲ್ಲೆಡೆ ರಕ್ಷಾಬಂಧನದ ಸಂಭ್ರಮ ಮನೆ ಮಾಡಿದೆ.
ವಿಜಯಪುರ: ದೇಶದ ಎಲ್ಲೆಡೆ ರಕ್ಷಾಬಂಧನದ ಸಂಭ್ರಮ – ನಿಡಗುಂದಿಯಲ್ಲಿ ರಾಖಿ ಖರೀದಿಗೆ ಮುಗಿಬಿದ್ದ ಜನಒಡಹುಟ್ಟಿದವರ ಪವಿತ್ರ ಪ್ರೀತಿ ಮತ್ತು ರಕ್ಷಣೆಯ ಭರವಸೆಯನ್ನು ಸಾರುವ ಈ ಹಬ್ಬವನ್ನು ವಿಜಯಪುರ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ವಿವಿಧಡೆ ರಾಖಿ ಖರೀದಿಗೆ ಮುಗಿಬಿದ್ದ ಜನ ಸಮೂಹ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ವಿವಿಧ ಬಣ್ಣ ಬಣ್ಣದ ರಾಖಿಗಳಿಗೆ ಭಾರೀ ಬೇಡಿಕೆ.
ಸಹೋದರ ಸಹೋದರಿಯರ ನಡುವಿನ ನಂಬಿಕೆ ಪ್ರೀತಿ ಮತ್ತು ರಕ್ಷಣೆಯ ಕವಚದ ಸಂಕೇತವೇ ಈ ಹಬ್ಬದ ವಿಶೇಷತೆ.ಹಲವಾರು ಪೌರಾಣಿಕ ಕಥೆಗಳನ್ನ ಒಳಗೊಂಡ ಈ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿರುವ ಈ ವರ್ಷ ವಿಶೇಷ ಸಂಭ್ರಮ.
ಹಣೆಗೆ ತಿಲಕ ಇಟ್ಟು, ಅಕ್ಷತೆ ಹಾಕಿ, ಆರತಿ ಎತ್ತಿ, ರಾಕಿ ಕಟ್ಟಿ ಸಿಹಿ ತಿನ್ನಿಸಿ ಸಹೋದರ ಸಹೋದರಿಗೆ ಉಡುಗೊರೆ ಮತ್ತು ರಕ್ಷಣೆಯ ಮಾತು ಕೊಡುವ ಹಬ್ಬವೇ ರಕ್ಷಾಬಂಧನ.ಈ ಹಬ್ಬ ಪುರಾತನ ಕಾಲದಿಂದಲೂ ರಕ್ಷಣೆಯ ಸಲುವಾಗಿ ಹುಟ್ಟಿದ ಹಬ್ಬ ಎಂದು ಹಿರಿಯರು ಹೇಳುವ ಮಾತು.
