
ಆನಂದ್ ಸ್ವೀಟ್ಸ್ ನಲ್ಲಿ ಖರೀದಿಸಿದ್ದ ಸಿಹಿ ಪದಾರ್ಥದಲ್ಲಿ ಕಲ್ಲಿನಂತಿರುವ ವಸ್ತು ಪತ್ತೆ!
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಆನಂದ್ ಸ್ವೀಟ್ಸ್ ನಲ್ಲಿ ಕಲ್ಲಿನಂತಿರುವ ಗಟ್ಟಿಯಾದ ವಸ್ತು ಪತ್ತೆಯಾಗಿದೆ.
ಆಗಸ್ಟ್ 20ರಂದು ಕಾರ್ತಿಕ್ ಗವಾಜಿ ಎಂಬುವರು ₹2,050 ಮೌಲ್ಯದ ಸಿಹಿತಿಂಡಿ ಖರೀದಿಸಿದ್ದಾರೆ.ಸಿಹಿ ತಿಂಡಿ ಸೇವಿಸುವ ವೇಳೆ ನಾಲಿಗೆ ಹಾಗೂ ಹಲ್ಲಿಗೆ ಗಾಯವಾಗಿದೆ ಎಂಬುದು ಕಂಡು ಬಂದಿದೆ.

ಈ ಘಟನೆ ಬೆಳಕಿಗೆ ಬಂದಂತೆ ಘಟನೆಗೆ ಸಂಬಂಧ ಪಟ್ಟ ಸಮಸ್ಥೆಗೆ ಕಾನೂನು ನೋಟಿಸ್ ನೀಡಿದ ಕಾರ್ತಿಕ್ ಗುವಾಜಿ. ಹಣ ಮರು ಪಾವತಿ ಮಾಡಿ ವೈದ್ಯಕೀಯ ಹಾಗು ದಂತ ಚಿಕಿತ್ಸಾ ವೆಚ್ಚ ಸೇರಿದಂತೆ ಪರಿಹಾರಕ್ಕೆ ಆಗ್ರಹ ನಡೆಸಿದ್ದಾರೆ.
ಈ ಘಟನೆ ಕುರಿತು 48 ಗಂಟೆಯೊಳಗೆ ಲಿಖಿತ ಉತ್ತರ ನೀಡುವಂತೆ ನೋಟಿಸ್ನಲ್ಲಿ ಒತ್ತಾಯಮಾಡಲಾಗಿದೆ.ಪ್ರತಿಕ್ರಿಯೆ ಸಿಗದಿದ್ದರೆ ಗ್ರಾಹಕ ಆಯೋಗ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡುವ ಎಚ್ಚರಿಕೆಯನ್ನು ನೀಡಿದ್ದಾರೆ.
