
ಈದ್ ಮಿಲಾದ್ ಹಬ್ಬದ ದಿನದಂದೇ ಬೈಕ್ ನಲ್ಲಿ ಮೂವರು ಯುವಕರು ಟ್ರಿಪಲ್ ರೈಡಿಂಗ್
ತುಮಕೂರು: ತುಮಕೂರು ನಗರದ ಬನಶಂಕರಿ ರೈಲ್ವೆ ಅಂಡರ್ ಪಾಸ್ ಬಳಿ ಹಬ್ಬದ ಆಚರಣೆಯ ನೆಪದಲ್ಲಿ ಮೂವರು ಯುವಕರು ಒಂದೇ ಬೈಕ್ ನಲ್ಲಿ ಹಸಿರು ಬಾವುಟ ಹಿಡಿದು ತ್ರಿಬಲ್ ರೈಡಿಂಗ್ ನಡೆಸಿದ್ದಾರೆ.
ಮೂರು ಜನ ಪ್ರಯಾಣ ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡುವುದರ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ,ಹಬ್ಬದ ಆಚರಣೆಯ ನೆಪದಲ್ಲಿ ಯುವಕರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕ ರಸ್ತೆಗಳಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಹಬ್ಬಕ್ಕೂ ಮುನ್ನವೇ ಪೊಲೀಸರು ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನಿಡದಂತೆ ಕಟ್ಟುನಿಟ್ಟಿನ ಸೂಚಕಗಳನ್ನು ನೀಡಿದ್ದರು.
ಸೂಚನೆಗಳನ್ನು ಗಾಳಿಗೆ ತೂರಿ ಹಬ್ಬದ ದಿನದಂದು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಬೇ ಜವಾಬ್ದಾರಿ ವರ್ತನೆಗಳ ವಿರುದ್ಧ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಪರಿಗಣಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯು ಇಂತಹ ವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು,ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರು ಡ್ರೋನ್ ಮತ್ತು ಸಿಸಿಟಿವಿ ಮೂಲಕ ತೀವ್ರ ನಿಗ ವಹಿಸಿದ್ದಾರೆ.
ಉಲ್ಲಂಘನೆ ಕಂಡು ಬಂದಲ್ಲಿ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.ನಿಯಮ ಉಲ್ಲಂಘನೆ ಹಬ್ಬದ ಮೆರವಣಿಗೆ ಹಾಗೂ ಆಚರಣೆ ವೇಳೆ ಮೂವರು ಯುವಕರು ಒಂದೇ ಬೈಕ್ ನಲ್ಲಿ ಹಸಿರು ಬಾವುಟ ಹಿಡಿದು ತ್ರಿಬಲ್ ರೈಡಿಂಗ್ ನಡೆಸಿದ್ದಾರೆ.
ತುಮಕೂರು ನಗರದ ಬನಶಂಕರಿ ರೈಲ್ವೆ ಅಂಡರ್ ಪಾಸ್ ಬಳಿ ಮುಸಲ್ಮಾನ್ ಬಾವುಟ ಹಿಡಿದು ರಸ್ತೆ ಯುದ್ದಕ್ಕೂ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ,ನಿಯಮ ಉಲ್ಲಂಘನೆ ಮಾಡುವುದರ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ,ಇನ್ನು ಪೊಲೀಸ್ ಇಲಾಖೆ ಈ ಮೂವರು ಯುವಕರಿಗೆ ಕಾನೂನು ಪಾಠ ಕಲಿಸಬೇಕಾಗಿದೆ.
