
ಗುಟ್ಕಾ ಪಾನ್ ಮಸಾಲ ವಿರೋಧಿಸಿ ಅಡಿಕೆ ಬೆಳೆಗಾರರ ಬೃಹತ್ ಪಾದಯಾತ್ರೆ – ಚನ್ನಗಿರಿಯಲ್ಲಿ ಆರಂಭ
ಚನ್ನಗಿರಿ : ಗುಟ್ಕಾ, ಪಾನ್ ಮಸಾಲ ನಿಷೇಧವನ್ನು ವಿರೋಧಿಸಿ ಅಡಿಕೆ ಬೆಳೆಗಾರರು ಮಾಡಾಳ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ರೈತರೊಂದಿಗೆ ಬೃಹತ್ ಪಾದಯಾತ್ರೆ ಆರಂಭಿಸಿದ್ದಾರೆ.
ಇಂದು ಚನ್ನಗಿರಿ ತಾಲ್ಲೂಕಿನ ಆರಾಧ್ಯ ದೇವತೆ ಕೆರೆ ಏರಿ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭ ಮಾಡಲಾಗಿದೆ.ಚನ್ನಗಿರಿ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಅವರು ಈ ರೈತ ಹೋರಾಟಕ್ಕೆ ಚಾಲನೆ ನೀಡಿದರು.
ಈ ಪಾದಯಾತ್ರೆಯ ಮೂಲಕ ಚನ್ನಗಿರಿ ತಾಲ್ಲೂಕು ವಿವಿಧ ಗ್ರಾಮಗಳಲ್ಲಿ ಅಡಿಕೆ ಬೆಳೆಗಾರರ ಕುಂದು ಕೊರತೆಗಳ ಬಗ್ಗೆ ರೈತರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸಲಾಗುವುದು.
ಮೂರು ದಿನದ ಪಾದಯಾತ್ರೆ ನಂತರ ದಾವಣಗೆರೆ ಜಿಲ್ಲೆಯ ಎಸಿ (AC) ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಗುವುದು ಎಂದು ಮಾಡಾಳ್ ಮಲ್ಲಿಕಾರ್ಜುನ್ ನೇತೃತ್ವದ ಹೋರಾಟ ಸಮಿತಿ ತಿಳಿಸಿದೆ.
ಗುಟ್ಕಾ ನಿಷೇಧದಿಂದ ಅಡಿಕೆ ಬೆಲೆ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
