
ಜಾನುವಾರು ಕಳ್ಳರ ಸಿನಿಮಾ ಸ್ಟೈಲ್ ಚೇಸ್.!

ಯಾದಗಿರಿ: ಅಂತರರಾಜ್ಯ ಜಾನುವಾರುಗಳ ಕಳ್ಳರನ್ನು ಹಿಡಿದ ಪೋಲಿಸರು.ಸಿನಿಮೀಯ ರೀತಿಯಲ್ಲಿ ಕಳ್ಳರ ಗಾಡಿ ಚೇಸ್ ಮಾಡಿದ ಯಾದಗಿರಿ ಪೋಲಿಸರು.
ಯಾದಗಿರಿಯಲ್ಲಿ ಅಕ್ರಮವಾಗಿ ಕರುಗಳನ್ನು ಕಳ್ಳತನ ಮಾಡುತ್ತಿದ್ದ ಹಂತಕರು ಇದೀಗ ಪೋಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ .ಹಾಗು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಜಾನುವಾರುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಕಪ್ಪು ಬಣ್ಣದ ಬೋಲೆರೋ ವಾಹನದಲ್ಲಿ ಜಾನುವಾರುಗಳನ್ನು ತುಂಬಿಕೊಂಡು ಹೋಗುತ್ತಿರುವಾಗ ಸಿನಿಮೀಯ ರೀತಿಯಲ್ಲಿ ಕಳ್ಳರ ಗಾಡಿ ಚೇಜ್ ಮಾಡಿದ ಯಾದಗಿರಿ ಪೋಲಿಸರು.
ಜಾನುವಾರುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ರಾಜ್ಯ ಹೆದ್ದಾರಿಯ ಮೇಲೆ ಜೆಸಿಬಿ ವಾಹನ ಅಡ್ಡಗಟ್ಟಿ ಕಳ್ಳರ ವಾಹನ ತಡೆದ ಪೋಲಿಸರು.ಈ ಘಟನೆ ಯಾದಗಿರಿ ತಾಲೂಕಿನ ಯರಗೋಳ ಟೋಲ್ ಬಳಿ ಕಳ್ಳರನ್ನು ಹಿಡಿದ ಯಾದಗಿರಿ ಪೋಲಿಸರು.
ದನಗಳನ್ನು ವಶಕ್ಕೆ ಪಡೆದುಕೊಂಡು , ಐದು ಜನ ಕಳ್ಳರನ್ನು ಬಂಧಿಸಿದ್ದಾರೆ .
