LatestTop Storiesಬೆಂಗಳೂರು-Bengaluru

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಬಿಗ್ ಶಾಕ್ – ದಾಖಲೆಯ ಮಟ್ಟಕ್ಕೆ ಏರಿದ ಸಕ್ಕರೆ, ಬೆಲ್ಲದ ಬೆಲೆ!

ಬೆಂಗಳೂರು: ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ. ಮಾರುಕಟ್ಟೆಯಲ್ಲಿ ಸಕ್ಕರೆ, ಬೆಲ್ಲದ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ.ಕೆಜಿಗೆ 55 ರೂ. ಇದ್ದ ಸಕ್ಕರೆ ದರ ದಿಢೀರ್ ಏರಿಕೆ ಕಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ 70 ರಿಂದ 75 ರೂಪಾಯಿ ವರೆಗೆ ದರ ಏರಿಕೆ ಆಗಿದೆ.

ದೇಶಿಯ ಸಕ್ಕರೆ ಬೆಲೆ ಶೇಕಡಾ 40ರಷ್ಟು ಏರಿಕೆ ಆಗಿದ್ದು, ಇದಕ್ಕೆ ಪ್ರಮುಖ ಕಾರಣ ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕೊರತೆ ಉಂಟಾಗಿರುವುದು ಎಂದು ಹೇಳಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಮಾರುಕಟ್ಟೆಗೆ ಸಕ್ಕರೆ ಪೂರೈಕೆ ಕಡಿಮೆಯಾಗಿದೆ.

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಬಿಗ್ ಶಾಕ್ ದಾಖಲೆಯ ಮಟ್ಟಕ್ಕೆ ಏರಿದ ಸಕ್ಕರೆ ಬೆಲ್ಲದ ಬೆಲೆ

ಕಬ್ಬಿನ ಕೊರತೆ, ಗಾಣಗಳಲ್ಲಿ ಬೆಲ್ಲದ ಉತ್ಪಾದನೆ ಕುಸಿತ ದಿಂದಾಗಿ ಬೆಲ್ಲದ ಬೆಲೆಯೂ ಏರಿಕೆಯಾಗಿದೆ. ಕ್ವಿಂಟಾಲ್ ಬೆಲ್ಲಕ್ಕೆ 6,500 ರಿಂದ 7,000 ರೂ. ವರೆಗೆ ಏರಿಕೆ ದಾಖಲಾಗಿದೆ.

ಹಬ್ಬದ ಸಮಯದಲ್ಲಿ ಸಿಹಿ ತಿನಿಸುಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಸಕ್ಕರೆ, ಬೆಲ್ಲದ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

Share with Friends
author avatar
Digital Desk