
5 ಎಕರೆ 38 ಗುಂಟೆ ಸರ್ಕಾರಿ ಜಾಗದಲ್ಲಿ ಕುಂಟೆ ಕಟ್ಟೆ + ಸ್ಮಶಾನ ದ್ವಂಸ – JCB ಬಳಸಿ ಕಿಡಿಗೇಡಿಗಳ ಕೃತ್ಯ
ಕೋಲಾರ : ಕೋಲಾರದ ಮುಳಬಾಗಿಲು ತಾಲೂಕು ಗೊಕುಂಟೆ ಸಂಭಂದಿಸಿದ ಬಂಜೂರು ಭೂಮಿ , 5 ಎಕರೆ 38 ಗುಂಟೆ ಸರ್ಕಾರಿ ಜಾಗದಲ್ಲಿ ಕುಂಟೆ ಕಟ್ಟೆ + ಸ್ಮಶಾನ ದ್ವಂಸ – JCB ಬಳಸಿ ಕಿಡಿಗೇಡಿಗಳು ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ . ಈ ಪ್ರಕರಣವನ್ನು ಪೊಲೀಸರಿಗೆ ಕಂಪ್ಲೇಂಟ್ ಮಾಡಲಾಗಿದ್ದು ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದ್ದಾರೆ . ಈ ಒಂದು ಪ್ರಕರಣ ಇತಿಯರ್ಥ ಆಗುವವರೆಗೂ ಈ ಸ್ಥಳಕ್ಕೆ ಯಾರು ಬರಬಾರದು ಎಂದು ಪೊಲೀಸರು ತಿಳಿಸಿದ್ದಾರೆ .
ನಂತರ ಒಂದು ತಿಂಗಳ ಒಳಗಡೆ ಕಟ್ಟೆ ಹಾಗೂ ಸ್ಮಶಾನವನ್ನು ದ್ವಂಸ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ . ಸಂಬಂಧ ಪಟ್ಟ ಅಧಿಕಾರಿಗಳ ಭಯವಿಲ್ಲ ಇವರು ನಡೆದಿದ್ದೇ ದಾರಿ ಹೇಳೋರಿಲ್ಲ ಕೇಳೋರಿಲ್ಲ? ಸಂಬಂಧ ಪಟ್ಟ ಊರಿನ ಹಿರಿಯರು ಕಟ್ಟಿಸಿದ ಕುಂಟೆ ಕಟ್ಟೆಯನ್ನು JCB ಗಳಿಂದ ಕೆಡವಲಾಗಿದ್ದು . ಸ್ಮಶಾನದ ಜಾಗವನ್ನು ಬಿಡದೆ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ ಈ ಒಂದು ಕೃತ್ಯಕ್ಕೆ ಯಾವುದೇ ಸರ್ಕಾರಿ ಪರ್ಮಿಷನ್ ಇಲ್ಲ ಎಂಬುದು ತಿಳಿದುಬಂದಿದೆ .
ಊರಿನ ಹಿರಿಯರು ಶ್ರಮ ಹಾಕಿ ಕಟ್ಟಿಸಿರುವ ಕಟ್ಟೆ ಇದಾಗಿದ್ದು ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ . ರಾತ್ರಿ ಹಗಲು ಎನ್ನದೆ JCB ಯಂತ್ರಗಳಿಂದ ಎರಡು ಕಡೆ ಕಟ್ಟೆ ಮತ್ತು ಸ್ಮಶಾನವನ್ನು ನೆಲಸಮ ಮಾಡಲಾಗಿದೆ . ಕುಂಟೆ ಕಟ್ಟೆಯನ್ನು ಒಡೆದಿದರಿಂದ ಊರಿನ ನೀರಿನ ಸಂಗ್ರಹಕ್ಕೆ ದೊಡ್ಡ ಹೊಡೆತ ಆಗಿದೆ ಎಂದು ರೈತರು ಪರದಾಡಿದ್ದಾರೆ .ಸರ್ಕಾರಿ ಬಂಜುರು ಭೂನಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಈ ಧ್ವಂಸ ಮಾಡಲಾಗಿದೆ ಎಂದು ಎನ್ನಲಾಗಿದೆ . ಈ ಒಂದು ಘಟನೆಯಿಂದ ಊರಿನ ಜನರು ಭಾರಿ ಆಕ್ರೋಶವನ್ನು ಹೊರಹಾಕಿದ್ದಾರೆ .
ಈ ವಿಷಯ ತಿಳಿದು ಸಂಪೂರ್ಣ ತಂಡ ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು VA ಹಾಗು RI ಓಡಿ ಓಡಿ ಬಂದು ಪರಿಶೀಲನೆ ಮಾಡಿದರು. ತಕ್ಷಣ ಕ್ರಮಕ್ಕೆ ಒತ್ತಾಯ ಮಾಡಿ ಸೋಮವಾರ ಒಳಗಡೆ ಕತ್ತೆ ಸಂಪೂರ್ಣವಾಗಿ ಯಥಾ ಸ್ಥಿತಿ ಯಾಗಿ ಮಾಡಬೇಕು ಎಂದು ಆದೇಶ ಮಾಡಿದ್ದಾರೆ . ಕುಂಟೆಯನ್ನು ಒಡೆದಿದ್ದರಿಂದ ಪಕ್ಷಿ , ಪ್ರಾಣಿಗಳ ನೀರಿನ ಮೂಲ ಕೂಡ ನಾಶವಾಗಿದೆ ಎಂದು ತಿಳಿದುಬಂದಿದೆ . 5 ಎಕರೆ 38 ಗುಂಟೆಯನ್ನು ಫೇಕ್ ದಾಖಲೆ ಸೃಷ್ಟಿ ಮಾಡಿದ್ದಾರೆ.
ಹಾಗು ಮಜಾರ ಗೊಕುಂಟೆಯಲ್ಲಿ ಹಲವು ಕಡೆ ಸರ್ಕಾರೀ ಜಾಮೀನು ಅಕ್ರಮ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ . ಈ ವಿಷಯದ ಕುರಿತು ದಂಡಾಧಿಕಾರಿಗಳು ಪರಿಶೀಲನೆ ಮಾಡಬೇಕು . ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ . ಹಾಗು ಸರ್ಕಾರಿ ಆಸ್ತಿ ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ . ನಮ್ಮ ಪೂರ್ವಜರ ಕಟ್ಟೆಯನ್ನು ಒಡೆದರು ಎಂದು ಗ್ರಾಮದ ಹಿರಿಯರು ಮಾಧ್ಯಮದ ಮುಂದೆ ಕಣ್ಣೀರಿತ್ತಿದ್ದಾರೆ .
