LatestTop Storiesರಾಯಚೂರು

ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ …!

ರಾಯಚೂರು : ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ .ನಿನ್ನೆ ಸಂಜೆ ಯುವತಿ ಬಯಲು ಶೌಚಾಲಯಕ್ಕೆ ತೆರಳಿದ್ದ ಯುವತಿಯೊಬ್ಬಳು ಬಹಳ ಹೊತ್ತದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಪೋಷಕರು ಆತಂಕಗೊಂಡಿದ್ದಾರೆ . ಬಹಳ ಹೊತ್ತಾದರೂ ಮನೆಗೆ ಬಾರದಿರುವದು ಗೊತ್ತಾಗಿ ಗ್ರಾಮದ ಸುತ್ತಲೂ ಹುಡುಕಾಟ ನಡೆಸಿ , ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದರೂ ಆ ಯುವತಿ ಪತ್ತೆ ಆಗಿಲ್ಲ …ನಂತರ

ಇಂದು ಬೆಳಿಗ್ಗೆ ಗ್ರಾಮದ ಬಾವಿಯಲ್ಲಿ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆಯಾದ್ದು. ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪರಿವಾರದವರ ದುಃಖ ಮುಗಿಲು ಮುಟ್ಟಿದೆ.

ಮೃತ ದೇಹ ಸಿಕ್ಕ ಸ್ಥಳಕ್ಕೆ ಸಿರವಾರ ತಹಶೀಲ್ದಾರ್ ಅಶೋಕ್ ಪವಾರ್, ಡಿವೈಎಸ್ಪಿ ಚಂದ್ರಶೇಖರ್ ನಾಯಕ್, ಸಿಪಿಐ ಶಶಿಕಾಂತ್ ಎಂ ಹಾಗೂ ಪಿಎಸ್ಐ ಚಂದ್ರಶೇಖರಯ್ಯ ಹಿರೇಮಠ ಭೇಟಿ ನೀಡಿ ಪರಿಶೀಲನೆ ಈ ಘಟನೆಯ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳದೊಂದಿಗೆ ಆರೋಪಿಗಳ ಹುಡುಕಾಟ ಚುರುಕುಗೊಂಡಿದ್ದು, 24 ಗಂಟೆಯೊಳಗೆ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಜಿಲ್ಲಾಧಿಕಾರಿ,ಪೂವಿತಾ ರವರು ತಿಳಿಸಿದರು.ಅವರಿಂದು ದಲಿತ ಮುಖಂಡರ ಜೊತೆಗೆ ಮಾತನಾಡಿ, ಈಗಾಗಲೇ ಆರೋಪಿಗಳ ಬಂಧನಕ್ಕೆ ಸೂಚನೆ ಕೊಡಲಾಗಿದೆ.

ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತ ನೀಡಲಿದೆ ಸಮಗ್ರವಾಗಿ ತನಿಖೆಗೆ ಸೂಚನೆ ಯಾವುದೇ ಕಾರಣಕ್ಕೂ ಆರೋಪಿಗಳು ಈ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

Share with Friends
author avatar
Digital Desk