
ರಾಯಚೂರಿನಲ್ಲಿ ಭೀಕರ ಅಪಘಾತ – ಇಬ್ಬರು ಯುವಕರು ಸಾವು..
ರಾಯಚೂರು : ರಾಯಚೂರಿನ ಜಾಲಹಳ್ಳಿ ಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ ಒಂದು ನಡೆದಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
ರಾಯಚೂರಿನ ತಿಂಥಣಿ ಬ್ರಿಜ್–ಕಲ್ಮಲಾ ರಾಜ್ಯ ಹೆದ್ದಾರಿಯ ಜಯಶಾಂತಲಿಂಗೇಶ್ವರ ಕಲ್ಯಾಣ ಮಂಟಪದ ಬಳಿ ಈ ದುರ್ಘಟನೆ ನಡೆದಿದೆ .
ಚಲಿಸುತ್ತಿದ್ದ ಬಸ್ ನಿಂದ ಈ ಘಟನೆ ನಡೆದಿರುವುದು ಕಂಡು ಬಂದಿದೆ ,ಹಾಗು ಮೃತಪಟ್ಟವರನ್ನು ಉದಯ ರಾಮಣ್ಣ (18),ಮತ್ತೋರ್ವನನ್ನು ವಿಜಯ ನೀಲಕಂಠ (18) ಎಂದು ಗುಟಿಸಲಾಗಿದೆ .
ಸಾರಿಗೆ ಬಸ್ ಚಕ್ರಕ್ಕೆ ಸಿಲುಕಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ ಮೃತಪಟ್ಟ ಇಬರೂ ಒಂದೇ ಬೈಕ್ ನಲ್ಲಿ ಜಾಲಹಳ್ಳಿ ಯಿಂದ ತಿಂಥಣಿ ಬ್ರಿಜ್ ಕಡೆಗೆ ಪ್ರಯಾಣ ಮಾಡುತಿದ್ದರು ಎಂಬುದು ಕಂಡು ಬಂದಿದೆ .
ಮತ್ತು ಬೈಕ್ , ಸಾರಿಗೆ ಬಸ್ ಹಾಗು ಆಟೋ ಪರಸ್ಪರ ಡಿಕ್ಕಿ ಆಗಿ ಸ್ಥಳದಲ್ಲಿ ಉದಯ ರಾಮಣ್ಣ ಹಾಗು ವಿಜಯ ನೀಲಕಂಠ ಇಬ್ಬರು ಭೀಕರ ಗಾಯಗೊಂಡು ಸಾವನ್ನಪ್ಪಿದ್ದಾರೆ . ಆಟೋ ಮೂಲಕ ಜಾಲಹಳ್ಳಿ ಕಡೆಗೆ ಬರುತ್ತಿದ್ದ ಜಯರಾಜ ಎಂಬುವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು , ಉದಯ ರಾಮಣ್ಣನಿಗೆ ಆರಂಭದಲ್ಲಿ ಜೀವ ಇತ್ತು ಎನ್ನಲಾಗಿದ್ದು..?
ಸ್ಥಳದಲ್ಲಿದ್ದ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಸಾಗಿಸವ ವೇಳೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ . ಈ ಘಟನೆ ಪೊಲೀಸರಿಗೆ ತಿಳಿದುಬಂದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ಒಂದು ಅಪಘಾತದ ಕುರಿತು ಪ್ರಕರಣ ಇನ್ನು ದಾಖಲಾಗಿಲ್ಲ ಎಂದು ತಿಳಿದುಬಂದಿದೆ .
