
ಗೋಕಾಕದಲ್ಲಿ ಅದ್ಧೂರಿ ಹರ್ ಘರ್ ತಿರಂಗಾ ಮೆರವಣಿಗೆ:
ಬೆಳಗಾವಿ : ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಅದ್ಧೂರಿ ತಿರಂಗಾ ಮೆರವಣಿಗೆ ನಡೆಯಿತು. 250 ಮೀಟರ್ ಉದ್ದದ ಬೃಹತ್ ತಿರಂಗಾ ಧ್ವಜ ಹಿಡಿದು ಸಾವಿರಾರು ಕಾರ್ಯಕರ್ತರು ಹಾಗೂ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದರು.

ಗೋಕಾಕ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ಆರಂಭವಾದ ತಿರಂಗಾ ಮೆರವಣಿಗೆ ಬಸವೇಶ್ವರ ವೃತ್ತದವರೆಗೆ ಸಾಗಿತು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
250 ಮೀಟರ್ ಉದ್ದದ ಬೃಹತ್ ತಿರಂಗಾ ಧ್ವಜವನ್ನು ಹಿಡಿದು ಕಾರ್ಯಕರ್ತರು ಹಾಗೂ ಮಹಿಳೆಯರು ದೇಶಭಕ್ತಿಯ ಉತ್ಸಾಹದೊಂದಿಗೆ ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ಭಾರತ ಮಾತಾಕಿ ಜೈ ಘೋಷಣೆಗಳು ಮೊಳಗಿದವು.
ಗೋಕಾಕ ನಗರದ ಪ್ರಮುಖ ರಸ್ತೆಗಳಲ್ಲಿ ತಿರಂಗಾ ರಾರಾಜಿಸುತ್ತಿದ್ದರೆ, ದೇಶಭಕ್ತಿ ಘೋಷಣೆಗಳಿಂದ ಇಡೀ ವಾತಾವರಣ ದೇಶಭಕ್ತಿಮಯವಾಗಿತ್ತು.
