LatestTop Storiesಬೆಂಗಳೂರು-Bengaluru

ಬೆಂಗಳೂರಿಗರಿಗೆ ‘ಪಾರ್ಕಿಂಗ್‌’ ಶಾಕ್..! ವಾಹನ ಸವಾರರಿಗೆ ಹೊಸ ತಲೆನೋವು ‘ಗ್ಯಾರಂಟಿ’

ಬೆಂಗಳೂರು, ಆ.13: ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ನಿಯಂತ್ರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸೈಕಲ್‌ಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ವಾಹನಗಳಿಗೂ ಪಾರ್ಕಿಂಗ್ ಶುಲ್ಕ ವಿಧಿಸುವ ಸಂಬಂಧ ಕರಡು ಅಧಿಸೂಚನೆ ಹೊರಡಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ರಸ್ತೆಗಳನ್ನ ಎ, ಬಿ ಮತ್ತು ಸಿ ಕ್ಯಾಟಗರಿಗಳಾಗಿ ವಿಂಗಡಿಸಿ, ಆಯಾ ರಸ್ತೆಗಳ ವರ್ಗಕ್ಕೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕ ನಿಗದಿಪಡಿಸಲು ಪ್ರಸ್ತಾವಿಸಲಾಗಿದೆ.

ರಾತ್ರಿ ವೇಳೆ ಮಾತ್ರ ಉಚಿತ ಪಾರ್ಕಿಂಗ್

ಪ್ರಸ್ತಾವಿತ ನಿಯಮದಂತೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಮಾತ್ರ ಉಚಿತ ಪಾರ್ಕಿಂಗ್‌ಗೆ ಅವಕಾಶ ನೀಡಲಾಗುತ್ತದೆ. ಇನ್ನು ಆಟೋ ನಿಲ್ದಾಣಗಳಲ್ಲಿಯೂ ಮಾತ್ರ ಉಚಿತ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸುವ ಪ್ರಸ್ತಾವವಿದೆ.

ಆಫ್‌ಸ್ಟ್ರೀಟ್ ಪಾರ್ಕಿಂಗ್‌ಗೆ ಮಾಸಿಕ ಪಾಸ್

ಆಫ್‌ಸ್ಟ್ರೀಟ್ ಪಾರ್ಕಿಂಗ್ ಬಳಸುವ ವಾಹನಗಳಿಗೆ ಮಾಸಿಕ ಪಾಸ್ ಕಡ್ಡಾಯ ಮಾಡುವ ಪ್ರಸ್ತಾವವಿದೆ. ಸಿಗ್ನಲ್‌ಗಳಿಂದ 50 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲ್ಲಿಸುವಂತಿಲ್ಲ. ಉಪಮುಖ್ಯ ರಸ್ತೆಗಳಿಂದ 25 ಮೀಟರ್ ಅಂತರದವರೆಗೆ ಪಾರ್ಕಿಂಗ್‌ಗೆ ನಿರ್ಬಂಧ ವಿಧಿಸುವ ಸಾಧ್ಯತೆಯಿದೆ.

ಮನೆ ಮುಂದೆ ವಾಹನ ನಿಲ್ಲಿಸಿದರೂ ಶುಲ್ಕ?

ಮನೆಗಳ ಮುಂದೆ ವಾಹನ ನಿಲ್ಲಿಸುವ ವಿಚಾರದಲ್ಲೂ ಹೊಸ ನಿಯಮಗಳು ಪರಿಣಾಮ ಬೀರಲಿವೆ. ಮನೆ ಮಾಲೀಕರೇ ಪಾರ್ಕಿಂಗ್ ಶುಲ್ಕ ಪಾವತಿಸುವ ಜವಾಬ್ದಾರಿ ಹೊಂದಿರಲಿದ್ದು, ಬಾಡಿಗೆದಾರರಿಗೆ ಮನೆ ಮಾಲೀಕರೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ ಎಂಬ ಪ್ರಸ್ತಾವವಿದೆ.

ಪ್ರಸ್ತಾವಿತ ಪಾರ್ಕಿಂಗ್ ಶುಲ್ಕ ಎಷ್ಟು?

ಎ ಕ್ಯಾಟಗರಿ ರಸ್ತೆಗಳು
ದ್ವಿಚಕ್ರ ವಾಹನ: ಗಂಟೆಗೆ ₹40
ಲಘು ವಾಹನ: ಗಂಟೆಗೆ ₹60

ಬಿ ಕ್ಯಾಟಗರಿ ರಸ್ತೆಗಳು
ದ್ವಿಚಕ್ರ ವಾಹನ: ಗಂಟೆಗೆ ₹30
ಲಘು ವಾಹನ: ಗಂಟೆಗೆ ₹80

ಸಿ ಕ್ಯಾಟಗರಿ ರಸ್ತೆಗಳು
ದ್ವಿಚಕ್ರ ವಾಹನ: ಗಂಟೆಗೆ ₹20
ಲಘು ವಾಹನ: ಗಂಟೆಗೆ ₹30–₹40

ಈ ನಿಯಮಗಳು ಸದ್ಯ ಕರಡು ಹಂತದಲ್ಲಿದ್ದು, ಅಂತಿಮ ಅಧಿಸೂಚನೆ ಹಾಗೂ ಜಾರಿಗೆ ಬರುವ ದಿನಾಂಕದ ಕುರಿತು ಸರ್ಕಾರದ ಮುಂದಿನ ನಿರ್ಧಾರ ಮಹತ್ವದ್ದಾಗಿದೆ.

Share with Friends
author avatar
News Desk