
ಕಸ ಎಸೆದ ನಾಲ್ವರ ವಿರುದ್ಧ ಎಫ್‌ಐಆರ್
ಬೆಂಗಳೂರು,ಜು.27: ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಜಿಬಿಎ ದಂಡದ ಜೊತೆ ಕೇಸ್ ದಾಖಲಿಸುತ್ತಿದ್ದು,ಈಗಾಗಲೇ ಕಸ ಕ್ಲೀನ್ ಮಾಡಿದ ಜಾಗದಲ್ಲಿ ಕಸ ಹಾಕಿದ ನಾಲ್ಕು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ ಉತ್ತರ ನಗರಪಾಲಿಕೆಯ ಸರ್ವಜ್ಞ ನಗರ ವಾರ್ಡ್ ಸಂಖ್ಯೆ 26ರ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಕಸವನ್ನ ತೆರವು ಮಾಡಲಾಗಿತ್ತು.ರಸ್ತೆಯನ್ನ ಸೌಂದರ್ಯೀಕರಣ ಮಾಡಲಾಗಿತ್ತು.
ಆದರೆ ರಾತ್ರಿ ವೇಳೆ ಮಾರ್ಷಲ್‌ಗಳು ಗಸ್ತು ತಿರುಗುವಾಗ ಕಸ ತೆಗೆದಿರೋ ಜಾಗದಲ್ಲಿ ನಾಲ್ಕು ಮಂದಿ ಕಸ ಎಸೆದಿರೋದು ಪತ್ತೆಯಾಗಿದೆ.ದಂಡ ಕಟ್ಟಿ ಅಂದರೆ ದಂಡ ಕಟ್ಟಲು ನಿರಾಕರಣೆ ಮಾಡಿದ್ದಾರೆ. ಹೀಗಾಗಿ, ನಾಲ್ಕು ಜನರ ಮೇಲೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದು, ಎಫ್‌ಐಆರ್ ಕೂಡ ಹಾಕಲಾಗಿದೆ.
