LatestTop Storiesಬೆಂಗಳೂರು-Bengaluru

ದಳಪತಿ ವಿಜಯ್‌ ಅಭಿನಯದ ʻಜನನಾಯಗನ್‌ʼ ರಿಲೀಸ್‌

ಬೆಂಗಳೂರು / ಚೆನ್ನೈ: ತಮಿಳು ಚಿತ್ರರಂಗದ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನನಾಯಗನ್’ ಸಿನಿಮಾ ಇಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ.

ಬೃಹತ್ ರಿಲೀಸ್: ದೇಶಾದ್ಯಂತ 2500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಂಡಿದ್ದು, ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ.


​ರಾಜಕೀಯ ರಂಗಪ್ರವೇಶದ ನಂತರದ ಮೊದಲ ಚಿತ್ರ: ವಿಜಯ್ ಅವರು ಸಕ್ರಿಯ ರಾಜಕೀಯಕ್ಕೆ ಧುಮುಕಿ, ತಮಿಳುನಾಡಿನ ಸಿಎಂ ಆದ ಬಳಿಕ ತೆರೆಕಂಡ ಮೊದಲ ಸಿನಿಮಾ ಇದಾಗಿರುವುದರಿಂದ ಈ ಚಿತ್ರದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ.
​ಬ್ಯಾಕ್ಸ್ ಆಫೀಸ್‌ನಲ್ಲಿ ಅಬ್ಬರ: ತಮಿಳುನಾಡು ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ವಿದೇಶಗಳಲ್ಲೂ ವಿಜಯ್‌ ಜಪ ಜೋರಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ.’


​ಅಭಿಮಾನಿಗಳ ಅದ್ದೂರಿ ಸಂಭ್ರಮ:ಚಿತ್ರಮಂದಿರಗಳ ಮುಂದೆ ವಿಜಯ್‌ ಬೃಹತ್ ಫ್ಲೆಕ್ಸ್ ಬ್ಯಾನರ್ ಹಾಕಿ ಅಭಿಮಾನಿಗಳು ಹಾರ-ಹಾಲಿನ ಅಭಿಷೇಕ ಮಾಡಿದ್ದಾರೆ.
​ಥಿಯೇಟರ್‌ಗಳ ಆವರಣದಲ್ಲಿ ಪಟಾಕಿ ಸಿಡಿಸಿ, ಡೊಳ್ಳು-ಬಾರಿಸಿ, ಕುಣಿದು ಕುಪ್ಪಳಿಸುವ ಮೂಲಕ ವಿಜಯ್‌ ಫ್ಯಾನ್ಸ್‌ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ.
​ಒಟ್ಟಾರೆಯಾಗಿ, ‘ಜನನಾಯಗನ್’ ಸಿನಿಮಾ ಮೂಲಕ ವಿಜಯ್ ಅವರು ಬೆಳ್ಳಿತೆರೆಯಲ್ಲೂ ಹಾಗೂ ರಾಜಕೀಯ ರಂಗದಲ್ಲೂ ತಮ್ಮ ಪಾರುಪತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ!

Share with Friends
author avatar
Digital Desk