
ಕರ್ನಾಟಕ ಪಾಲಿನ ಕೃಷ್ಣಾ ನದಿ ನೀರಿಗೆ ಮಹಾರಾಷ್ಟ್ರ ಸರ್ಕಾರ ಕನ್ನಾ..!
ಮಹಾರಾಷ್ಟ್ರ : ಮಹಾರಾಷ್ಟ್ರಸರ್ಕಾರ ಕೋಲ್ಲಾಪೂರ ಜೀಲ್ಲೆಯ ಇಂಚಲಕರಂಜಿ ನಗರಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಡಿಯ ಕೃಷ್ಣಾ ನದಿಯಿಂದ 4 ಟಿಎಂಸಿ ನೀರು ಪೂರೈಸುವ ರಾಧಾಕೃಷ್ಣ ಯಾತ ನೀರಾವರಿ ಯೋಜನೆಗೆ ಅನುಮೋದನೆ ನೀಡಿರುವುದು ಗಡಿ ಭಾಗದ ರೈತರಲ್ಲಿ ತೀವ್ರ ಆತಂಕ ಹುಟ್ಟಿಸಿದೆ.
ದಾನವಾಡ-ಯಂಕ್ಸಬಾ- ಕಲ್ಲೋಳ-ಚಂದೂರ ಸಂಗಮ ಪ್ರದೇಶದಿಂದ ನೀರಿನ ಬಳಕೆಗೆ ಯಾತ ನೀರಾವರಿ ಯೋಜನೆ ರೂಪಿಸಲಾಗಿದ್ದು, ಕಲ್ಲೋಳ ಬ್ಯಾರೇಜ್ ನಲ್ಲಿ ಸಂಗ್ರಹವಾಗುವ ನೀರಿನ ಮೇಲೆ ಇದರಿಂದ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ರೈತರ ವಾದವಾಗಿದೆ.

ಈ ಬ್ಯಾರೇಜಿನ ನೀರನ್ನೆ ಚಿಕ್ಕೋಡಿ ಭಾಗದ ನೂರಾರು ಹೆಕ್ಟರ್ ಭೂಮಿ ಹಾಗೂ 10 ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ಮತ್ತು ನೀರಾವರಿ ಅಗತ್ಯಗಳಿಗೆ ಬಳಸಲಾಗುತ್ತದೆ.ಇಚಲಕರಂಜಿ ನಗರದ ಸಮೀಪದಲ್ಲಿ ಪಂಚಗಂಗಾ ನದಿ ಹರಿಯುತ್ತಿದ್ದು ಸುಮಾರು 30 ಕಿ.ಮೀ ದೂರದ ಕರ್ನಾಟಕ ಗಡಿಯ ಕೃಷ್ಣಾ ನದಿಯಿಂದ ನೀರು ಎತ್ತಲು ಮುಂದಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಯೋಜನೆಯಿಂದ ಕರ್ನಾಟಕದ ಜನರ ನೀರಿನ ಹಕ್ಕಿಗೆ ಧಕ್ಕೆ ಆಗುವ ಸಾದ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಯೊಜನೆ ಜಾರಿಯಾಗುವ ಮುನ್ನವೇ ರಾಜ್ಯ ಸರ್ಕಾರ ಮದ್ಯ ಪ್ರವೇಶಿಸಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡಿಸಿ ಕರ್ನಾಟಕದ ಹಿತಾಸಕ್ತಿ ಕಾಪಾಡಬೇಕು. ಇಲ್ಲದಿದ್ದರೆ ಚಿಕ್ಕೋಡಿ ಭಾಗದ ರೈತರಿಗೆ ಭವಿಷ್ಯದಲ್ಲಿ ನೀರಿನ ಅಭಾವ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ರೈತರು ಎಚ್ಚರಿಸಿದ್ದಾರೆ.
