EntertainmentLatestTop Storiesಬೆಂಗಳೂರು-Bengaluruಸ್ಯಾಂಡಲ್​ವುಡ್-Sandalwood

ಅಭಿಮಾನಿಗಳ ಆಕ್ರೋಶಕ್ಕೆಗುರಿಯಾಗಿದ್ದಾರೆ ಆರ್ಯವರ್ಧನ್ ಗೂರೂಜಿ..!

ಮೊನ್ನೆಯಷ್ಟೇ ಲಕ್ಷ್ಮಿ ದೇವಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ, ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಗ್ಗೆ “ಇದೊಂದು ಆವರೇಜ್ ಸಿನಿಮಾ, ಇದರಿಂದ ಲಾಭವೂ ಇಲ್ಲ ನಷ್ಟವೂ ಇಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.

‘ಲಕ್ಷ್ಮಿ’ ದೇವಿ ಬಗ್ಗೆ ಕೆಟ್ಟ ಪದ ಬಳಕೆ ಮಾಡಿ ಹಿಂದೂಗಳ ತೀವ್ರ ವಿರೋಧಕ್ಕೆ ಗುರಿಯಾಗಿದ್ದ ಆರ್ಯವರ್ಧನ್ ಗೂರೂಜಿ ಇದೀಗ ನಟ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ; ಕಿರಿಕ್ ಕೀರ್ತಿ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ‘ಟಾಕ್ಸಿಕ್’ ಸಿನಿಮಾ ಆವರೇಜ್ ಅಷ್ಟೇ ಎಂದು ಭವಿಷ್ಯ ನುಡಿದಿದ್ದ ಗುರೂಜಿಗೆ, “ನಿಮ್ಮ ಜಾತಕ ನಿಮಗೆ ಗೊತ್ತಿದ್ದರೆ ಬಿಗ್ ಬಾಸ್‌ನಿಂದ ಅಷ್ಟು ಬೇಗ ಯಾಕೆ ಹೊರಬಂದಿರಿ?” ಎಂದು ಯಶ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಖಡಕ್ ತಿರುಗೇಟು ನೀಡಿದ್ದಾರೆ.

ಇದರಿಂದ ಕೆರಳಿದ ಯಶ್ ಅಭಿಮಾನಿಗಳು, “ಬೇರೆಯವರ ಸಿನಿಮಾ ಭವಿಷ್ಯ ಹೇಳುವ ಮುನ್ನ ನಿಮ್ಮ ಜಾತಕ ನಿಮಗೊತ್ತಿತ್ತಾ? ಗೊತ್ತಿದ್ದರೆ ಬಿಗ್ ಬಾಸ್‌ನಿಂದ ಅಷ್ಟು ಬೇಗ ಯಾಕೆ ಎಲಿಮಿನೇಟ್ ಆಗ್ತಿದ್ರಿ?” ಎಂದು ಸೋಶಿಯಲ್ ಮೀಡಿಯಾದಲ್ಲಿ ಗುರೂಜಿಯನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡಿದ್ದಾರೆ.

Share with Friends
author avatar
Digital Desk