
ಬೆಂಗಳೂರಿನ ಮೆಟ್ರೋ ಪ್ರಯಾಣಿಕರೇ ಹುಷಾರ್..!!
ಹೊಸ ದಂಡದ ನಿಯಮ ಜಾರಿ: ಬೆಂಗಳೂರು ನಮ್ಮ ಮೆಟ್ರೋದಲ್ಲಿ (BMRCL) ಸುರಕ್ಷತೆ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಏನೇನು ನಿಷೇಧ?: ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ಜೋರಾಗಿ ಮ್ಯೂಸಿಕ್ ಹಾಕುವುದು, ರೀಲ್ಸ್/ವಿಡಿಯೋ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಟ್ರ್ಯಾಕ್‌ಗೆ ಜಿಗಿಯುವುದು ಅಥವಾ ಟ್ರ್ಯಾಕ್ ಮೇಲೆ ಓಡಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಟಿಕೆಟ್ ದುರ್ಬಳಕೆಗೆ ಬ್ರೇಕ್:ಟಿಕೆಟ್ ಮತ್ತು ಪಾಸ್‌ಗಳನ್ನು ದುರ್ಬಳಕೆ ಮಾಡಿಕೊಂಡರೂ ಇನ್ನು ಮುಂದೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
ದಂಡದ ಮೊತ್ತದ ವಿವರ: ಸೆಕ್ಷನ್ 59(1) ರ ಅಡಿಯಲ್ಲಿ ಈ ಹಿಂದೆ ಇದ್ದ ₹500 ದಂಡದ ಮೊತ್ತವನ್ನು ಈಗ ₹2,500 ರಿಂದ ₹10,000 ವರೆಗೆ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲದೆ, ಈ ದಂಡದ ಮೊತ್ತವು ಪ್ರತಿ 3 ವರ್ಷಗಳಿಗೊಮ್ಮೆ ಶೇ. 10 ರಷ್ಟು ಹೆಚ್ಚಾಗಲಿದೆ.
ಮೆಟ್ರೋದಲ್ಲಿ ಪ್ರಯಾಣಿಸುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ, ನಿಯಮಗಳನ್ನು ಪಾಲಿಸಿ ಮತ್ತು ಅನಗತ್ಯ ದಂಡದಿಂದ ಬಚಾವಾಗಿ!
