LatestTop Storiesಬೆಂಗಳೂರು-Bengaluruರಾಜ್ಯ-Karnataka

ಬಿಡದಿ ಟೌನ್ ಶಿಪ್ ಯೋಜನೆ,ಸಮಿತಿ ರಚನೆಗೆ ಸರ್ಕಾರ ನಿರ್ಧಾರ

ಬೆಂಗಳೂರು, ಜು.15: ಬಿಡದಿ ಟೌನ್ ಶಿಪ್ ಯೋಜನೆ ಸಂಬಂಧ ಸಮಿತಿ ರಚನೆ ಮಾಡಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು,ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸಮಿತಿಯಲ್ಲಿ ಯಾರು,ಯಾರು ಇರಬೇಕು ಎಂದು ನಿರ್ಧಾರ ಮಾಡುತ್ತೇವೆ ಎಂದರು.
ಇನ್ನು ನನಗೆ ಬಿಡದಿ ಟೌನ್ ಶಿಪ್ ಯೋಜನೆ ಜಾರಿಗೆ ತರುವ ತರಾತುರಿಯಲ್ಲ, ಶಾಸಕರು, ಅಧಿಕಾರಿಗಳು ಅಥವಾ ನಿವೃತ್ತ ನ್ಯಾಯಾಧೀಶರು ಸಮಿತಿಯಲ್ಲಿರಬೇಕೊ ಎಂದು ತೀರ್ಮಾನ ಮಾಡುತ್ತೇವೆ. ಅವರು ನೀಡಿದ ವರದಿ ಆಧಾರದ ಮೇಲೆ ಮುಂದುವರಿಯುತ್ತೇವೆ ಎಂದು ಹೇಳಿದರು.
ಇನ್ನು ರೈತರು ಜಮೀನು ನೀಡುವಾಗ ಕಾನೂನಾತ್ಮಕವಾಗಿ ವಿಷಯವನ್ನು ನಿರ್ವಹಿಸಲು ಸಮಿತಿ ರಚಿಸುತ್ತಿದ್ದೇವೆ.ಇಲ್ಲಿ ಸರ್ಕಾರ ಮತ್ತು ರೈತರ ನಡುವಿನ ವ್ಯವಹಾರ, ರೈತರ ಜಮೀನಿಗೆ ನಿಖರ ನ್ಯಾಯಬದ್ಧ ಪರಿಹಾರ ನೀಡಲಾಗುವುದು, ಈ ಯೋಜನೆ ಕೈಬಿಟ್ಟಿಲ್ಲ, ಹಾಗೆಂದು ಒತ್ತಾಯಪೂರ್ವಕವಾಗಿ ರೈತರಿಂದ ಜಮೀನು ಕಿತ್ತುಕೊಳ್ಳುವುದಿಲ್ಲ ಎಂದು ತಿಳಿಸಿದರು.

Share with Friends
author avatar
Digital Desk