
ಸಿದ್ದು- ಸತೀಶ್ ನಡುವಿನ ಭಿನ್ನಾಭಿಪ್ರಾಯ ಜಗಜ್ಜಾಹೀರು!
ಹಾವೇರಿ, 14 : ರಾಜ್ಯ ಕಾಂಗ್ರೆಸ್ ನಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವಿನ ಭಿನ್ನಾಭಿಪ್ರಾಯ ಮತ್ತೆ ಚರ್ಚೆಗೆ ಬಂದಿದೆ.
ಹಿಂದೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ವೇಳೆ ಸತೀಶ್ ಜಾರಕಿಹೊಳಿ ಜೊತೆಗಿನ ಅವರ ಭಿನ್ನಾಭಿಪ್ರಾಯ ಬಹಳ ದೊಡ್ಡಮಟ್ಟಿನ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೆ ಅದೇ ವಿಚಾರ ರಾಜ್ಯ ಕಾಂಗ್ರೆಸ್ ನಲ್ಲಿ ಚರ್ಚೆಗೆ ಬಂದಿದೆ.

ಇನ್ನು ತಮ್ಮ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಸ್ವತಃ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ರಾಜ್ಯದ ಸಮಸ್ಯೆ ಏನಲ್ಲ. ಅದು ನಮ್ಮ ನಮ್ಮ ಸಮಸ್ಯೆ ಎಂದು ತಿಳಿಸಿದ್ದಾರೆ.
ಇನ್ನು ಬಿಡದಿ ಟೌನಶಿಪ್ನಲ್ಲಿ ವಿಚಾರವಾಗಿ ಪ್ರತಿಕ್ರಿಯಿಸಿ ರೈತರ ಜಮೀನನ್ನ ಒತ್ತಾಯ ಪೂರ್ವಕವಾಗಿ ತೆಗೆದುಕೊಳ್ಳುವುದಿಲ್ಲ. ಸ್ವಯಂಪ್ರೇರಿತವಾಗಿ ಯಾರು ಕೊಡುತ್ತಿದ್ದಾರೋ ಅವರ ಜಮೀನು ತೆಗೆದುಕೊಳ್ಳಲಾಗುತ್ತಿದೆ. ನಿನ್ನೆ ಕೂಡಾ ಜಮೀನು ಕೊಟ್ಟವರದ್ದು ಸರ್ವೆ ಮಾಡೋಕೆ ಅಧಿಕಾರಿಗಳು ಹೋಗಿದ್ರು. ಕೊಡಲ್ಲ ಅಂದರೆ ಕೊಡಲ್ಲ ಅಷ್ಟೆ. ಯಾರು ಕೊಡ್ತಾರೆ ಅವರದ್ದು ತಗೊಂಡಿದ್ದಾರೆ ಎಂದು ಹೇಳಿದರು.
