
ಕುಡಿತದ ಚಟ ಬೀಡುವಂತೆ ಹೇಳಿದ್ದಕ್ಕೆ ಯುವಕ ಸೂಸೈಡ್
ನೆಲಮಂಗಲ,(ಬೆಂ.ಗ್ರಾಮಾಂತರ)ಜು.೧೧ : ಪೋಷಕರ ಬುದ್ದಿವಾದದಿಂದ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿದೆ.
ತೋಟದಗುಡ್ಡದಹಳ್ಳಿಯ ದೇವರಾಜ್(18)ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು,ಈತ ಕಟ್ಟಡ ಕಾರ್ಮಿಕರಾಗಿದ್ದ ಶಾಂತಪ್ಪ ಮತ್ತು ಭೀಮವ್ವ ದಂಪತಿ ಪುತ್ರನಾಗಿದ್ದಾನೆ.
ಇನ್ನು ಶಾಂತಪ್ಪ ಮತ್ತು ಭೀಮವ್ವ ದಂಪತಿ ಕುಟಂಬ 10 ವರ್ಷಗಳ ಹಿಂದೆ ಯಾದಗಿರಿಯಿಂದ ಬೆಂಗಳೂರಿಗೆ ಬಂದಿತ್ತು.ಬೆಂಗಳೂರಿನಲ್ಲೇ ಕಟ್ಟಡ ಕಾರ್ಮಿಕ ಕೆಲಸ ಮಾಡುತ್ತಿದ್ದ ದಂಪತಿ ಪುತ್ರನಾಗಿದ್ದ ದೇವರಾಜ್ ಪಿಯುಸಿ ಓದುತ್ತಿದ್ದಾಗಲೇ ಕಾಲೇಜಿಗೆ ಹೋಗದೆ ಕುಡಿತದ ಚಟ ಮೈಗೂಡಿಸಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಕುಡಿತದ ಚಟ ಬೀಡುವಂತೆ ದಂಪತಿ ಮಗನಿಗೆ ಬುದ್ದಿವಾದ ಹೇಳಿದ್ದರು.ಆದರೆ ಪೋಷಕರ ಬುದ್ದಿವಾದದಿಂದ ಮನನೊಂದ ದೇವರಾಜ್ ಯಾರು ಇಲ್ಲದ ವೇಳೆ ಮನೆಯ ಶೀಟ್ ನ ಕಂಬಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಶಾಂತಪ್ಪ ಊಟಕ್ಕೆಂದು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು,ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
