
ನೆಲಮಂಗಲದಲ್ಲಿ ಆಪರೇಷನ್ ಫುಟ್ ಪಾತ್ ಶುರು!
ನೆಲಮಂಗಲ,(ಬೆಂ.ಗ್ರಾಮಾಂತರ)ಜು.9: ನೆಲಮಂಗಲದಲ್ಲಿ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆಯಿತು.
ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ನಡೆದ ಪಾದಚಾರಿ ಮಾರ್ಗ ಒತ್ತುವರಿ ತೆರವು ವೇಳೆ ಅಂಗಡಿ ಮಾಲೀಕರು ಹಾಗೂ ಬೀದಿಬದಿ ವ್ಯಾಪಾರಿಗಳು ಅಕ್ರೋಶ ವ್ಯಕ್ಯಪಡಿಸಿದರು.

ಇನ್ನು ನೆಲಮಂಗದೆಲ್ಲೆಡೆ ಫುಟ್ ಪಾತ್ ಒತ್ತುವರಿಯಾಗಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಪೊಲೀಸರ ಜೊತೆಗೂಡಿ ಒತ್ತುವರಿ ತೆರವು ಕೈಗೊಂಡರು.ಆದರೆ ಈ ಒತ್ತುವರಿ ತೆರವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೀದಿಬದಿ ವ್ಯಾಪಾರಿಗಳು ಏಕಾಏಕಿ ಹೀಗೆ ಮಾಡಿದ್ರೆ ವ್ಯಾಪಾರ ಹೇಗೆ ಮಾಡಬೇಕು. ನಮ್ಮ ಕಷ್ಟ ಕೇಳುವವರು ಯಾರೂ ಇಲ್ಲವೇ?,ಶಾಸಕರು ನಮಗೆ ವ್ಯಾಪಾರ ನಡೆಸಲು ಜಾಗ ನೀಡಬೇಕು ಎಂದು ಆಗ್ರಹಿಸಿದರು.
