BlogLatestರಾಜಕೀಯ | Politics

ಮುಡಾ ಹಗರಣ : ಸಿಎಂ ರಾಜಿನಾಮೆಗೆ ಸಂಸದ ಯದುವೀರ್ ಒಡೆಯರ್ ಆಗ್ರಹ

ಮೈಸೂರು : ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಸಂಬಂಧ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದು, ಮುಡಾ ಹಗರಣ ಸಂಬಂಧ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ ಕೊಟ್ಟಿದ್ದು, ಪ್ರಕರಣದಲ್ಲಿ ಸಿಎಂ ಅವರ ನೇರ ಪಾತ್ರವಿದೆ ಎಂದೂ ಗಂಭೀರವಾಗಿ ಆರೋಪಿಸಿದರು.

ಈ ಕಾರಣಕ್ಕೆ ಅವರು ಸ್ಥಾನದಲ್ಲಿ‌ ಮುಂದುವರಿಯಬಾರದು. ಪಾರದರ್ಶಕ ತನಿಖೆಗೆ ಅತ್ಯವಿದ್ದು, ಆದ್ದರಿಂದ ಸ್ವತಂತ್ರ ಸಂಸ್ಥೆಯಿಂದ ತನಿಖೆ ಆಗಲೇಬೇಕು. ಈ ನಿಟ್ಟಿನಲ್ಲಿ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಮುಡಾ‌ ಹಗರಣ ಸಂಬಂಧ ಕಳೆದೆರಡು ವಾರದ ಹಿಂದೆಯೂ ಮಾತನಾಡಿದ್ದ ಯದುವೀರ್, ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದಿದ್ದರು. ಅಲ್ಲದೇ ಮುಡಾ ಸೈಟ್ ವಾಪಸ್ ಕೊಟ್ಟಿರುವುದು ನೋಡಿದರೇ ತಪ್ಪಾಗಿದೆ ಎಂದೇ ಅರ್ಥ. ಸಿಎಂ ಅವರ ಹೆಸರೇ ಖುದ್ದು‌ ಪ್ರಕರಣದಲ್ಲಿ ಕೇಳಿ ಬಂದಿದೆ ಎಂದಿದ್ದರು.

Share with Friends
author avatar
News Desk