BlogEntertainmentTop Storiesಸ್ಯಾಂಡಲ್​ವುಡ್-Sandalwood

‘ಬಿಗ್‌ಬಾಸ್’ಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್..!

ಬೆಂಗಳೂರು : ಕಿಚ್ಚ ಸುದೀಪ್ ಅವರು ಬಿಗ್‌ಬಾಸ್‌ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಾನು ನಿರೂಪಕನಾಗಿರುವ ಕೊನೆಯ ಬಿಗ್‌ಬಾಸ್ ಸೀಸನ್ ಇದಾಗಿದ್ದು, ಮುಂದಿನ ವರ್ಷದಿಂದ ತಾನು ಇದರಿಂದ ಹೊರಬರುತ್ತೇನೆ ಎಂದು ಹೇಳಿದ್ದಾರೆ.

ಹತ್ತು ವರ್ಷಗಳ ಸುದೀರ್ಘ ಪಯಣದ ನಂತರ ಬೇರೆಡೆಗೆ ತಮ್ಮ ನಡೆಯನ್ನು ಮುಂದುವರಿಸುವ ಸಮಯ ಬಂದಿದೆ ಎಂದು ಸುದೀಪ್ ತಿಳಿಸಿದ್ದಾರೆ. 11ನೇ ವೃತಿ ತಮ್ಮ ಕೊನೆಯ ನಿರೂಪಣೆ ಎಂದು ಘೋಷಿಸಿದ್ದಾರೆ.ಎರಡು ವಾರ ಮುಗಿಯುತ್ತಿದ್ದಂತೆ ಅವರ ಈ ನಿರ್ಧಾರ ಅಚ್ಚರಿ ಮೂಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಕಾರ್ಯಕ್ರಮ ಟಿವಿಆರ್ ಮತ್ತು ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. 10+1 ವರ್ಷಗಳ ಪ್ರಯಾಣ ನನ ಪಾಲಿಗೆ ಬೆಸ್ಟ್​ ಆಗಿದೆ. ಇದು ಮುಂದೆ ಸಾಗಿ ನಾನು ಏನು ಮಾಡಬೇಕೆಂಬುದನ್ನು ತಿಳಿಯುವ ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ನಿರ್ಧಾರವನ್ನು ನನ್ನ ಕಲರ್ಸ್​ ಹಾಗೂ ಹಲವು ವರ್ಷಗಳಿಂದ ಬಿಗ್​ ಬಾಸ್​ ಫಾಲೋ ಮಾಡ್ತಿರುವ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ’ ಎಂದು ಸುದೀಪ್ ಟ್ವೀಟ್​ನಲ್ಲಿ ಬರೆದಿದ್ದಾರೆ.

ಈ ಅವೃತಿ ಆರಂಭಕ್ಕೂ ಮನ್ನವೇ ಸುದೀಪ್ ಬದಲಾವಣೆ ಮಾತುಗಳು ಕೇಳಿಬಂದಿತ್ತು ಆದರೆ ಅವರು 11 ಆವೃತಿ ಮುಂದುವರೆಸಿ 15 ದಿನದಲ್ಲೇ ಬಿಗ್ ಬಾಸ್ ಮನೆಯಲ್ಲಿ ವಿವಾದ ಸೃಷ್ಠಿಯಾಗಿತ್ತು.

ಜನರು ಎಲ್ಲಿಯವರೆಗೆ ಇಷ್ಟಪಡ್ತಾರೋ ಅಲ್ಲಿಯವರೆಗೆ ‘ಬಿಗ್ ಬಾಸ್’ ಶೋ ನಿರೂಪಣೆ ಮಾಡ್ತೀನಿ ಎಂದು ಹೇಳಿದ್ದ ಕಿಚ್ಚ ಸುದೀಪ್ ಅವರು ಈಗ ಏಕಾಏಕಿ ಮುಂದಿನ ಸೀಸನ್ ನಿರೂಪಣೆ ಮಾಡೋದಿಲ್ಲ ಎಂದು ಟ್ವೀಟ್ ಮಾಡಿದ್ದರು. ಸುದೀಪ್ ಯಾಕೆ ಈಗ ಈ ನಿರ್ಧಾರ ತಗೊಂಡರು ಎಂಬ ಅನುಮಾನ ಶುರುವಾಗಿದೆ.

ಅಂದಹಾಗೆ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್‌ ಅನ್ನೋ ಕಾರ್ಯಕ್ರಮವನ್ನು ಬಹಳ ಇಷ್ಟಪಟ್ಟು ಮಾಡ್ತಾರೆ. ಸಿನಿಮಾದ ಹೊರತಾಗಿ ಜನರ ಜೊತೆಗೆ ತನ್ನ ನೈಜ ವ್ಯಕ್ತಿತ್ವವನ್ನು ಅನಾವರಣ ಮಾಡಲು, ತಾನು ಇಷ್ಟಪಟ್ಟಂತಿರಲು ಇರುವ ವೇದಿಕೆ ಅದು ಎಂದು ಭಾವಿಸಿದ್ದಾರೆ. ಹೀಗಾಗಿಯೇ ಅವರು ಇಷ್ಟಪಟ್ಟು, ಪಕ್ಕಾ ಪೂರ್ವ ಸಿದ್ಧತೆಯೊಂದಿಗೆ ಬಿಗ್ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇದೇ ಕಾರಣಕ್ಕೆ ಅವರ ನಿರೂಪಣೆ ಕರ್ನಾಟಕದ ಜನತೆಗೆ ಇಷ್ಟವಾಗಿರೋದು.

ಮಹತ್ವದ ಸುಳಿವು ಕೊಟ್ಟ ರೂಪೇಶ್ ರಾಜಣ್ಣ :
ಈಗ ‘ಬಿಗ್‌ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿ’, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಈ ಕುರಿತು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

“ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್ ‘ಬಿಗ್ ಬಾಸ್’ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋದಿಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು, ಅಸಲಿ ವಿಷಯ ನಾಳೆ ಮಾತಾಡ್ತೀನಿ” ಎಂದು ರೂಪೇಶ್ ರಾಜಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 8’ ಸ್ಪರ್ಧಿ ಚಕ್ರವರ್ತಿ ಚಂದ್ರದೂಡ್ ಕೂಡ ‘ಈ ನಿರ್ಧಾರದಿಂದ ನಿಮ್ಮ ಮೇಲಿನ ಗೌರವ ಜಾಸ್ತಿ ಆಯ್ತು’ ಎಂದು ಟ್ವೀಟ್ ಮಾಡಿದ್ದಾರೆ.

Share with Friends
author avatar
News Desk