BlogLatestTop Storiesವಿದೇಶ-International

ಹಮಾಸ್ ಉಗ್ರರು ಕಮಾಂಡ್ ಸೆಂಟರ್‌ ಮಾಡಿಕೊಂಡಿದ್ದ ಮಸೀದಿ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ, 26 ಮಂದಿ ಸಾವು

ಬೈರೂತ್‌: ಇಸ್ರೇಲ್‌ ಕೋಪ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ, ಹಮಾಸ್ ಉಗ್ರರ ಹುಟ್ಟಡಗಿಸಲು ನಿರ್ಧರಿಸಿರುವ ಇಸ್ರೇಲ್‌ ಗಾಜಾದಲ್ಲಿನ ಮಸೀದಿಯ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯವು ತಿಳಿಸಿದೆ.

ದಾಳಿ ಬಗ್ಗೆಸ್ಪಷ್ಟನೆ ನೀಡಿರುವ ಇಸ್ರೇಲ್‌, ನಾವು ಹಮಾಸ್ ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದೇವೆ ಎಂದು ಹೇಳಿಕೊಂಡಿದೆ. ಮಸೀದಿಯಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಮಾಸ್ ಭಯೋತ್ಪಾದಕರ ಮೇಲೆ ನಿಖರವಾದ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಸೆಂಟ್ರಲ್ ಡೀರ್ ಅಲ್-ಬಲಾಹ್‌ನಲ್ಲಿನ ಮಸೀದಿಯೊಂದರಲ್ಲಿ ಜನರು ಆಶ್ರಯ ಪಡೆದಿದ್ದರು. ಇದರ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ. ಪರಿಣಾಮ ಅದರಲ್ಲಿದ್ದ 26 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Share with Friends
author avatar
News Desk