Health | ಆರೋಗ್ಯ

ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕ? ಈ ಟಿಪ್ಸ್​ ಫಾಲೋ ಮಾಡಿ

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಅನೇಕರು ಅನೇಕ ರೀತಿಯ ಡಯಟ್‌ಗಳನ್ನು ಫಾಲೋ ಮಾಡುತ್ತಾರೆ ಮತ್ತು ವಿವಿಧ ರೀತಿಯ ವ್ಯಾಯಾಮ ಮತ್ತು ಕಸರತ್ತುಗಳನ್ನು ಮಾಡುತ್ತಾರೆ. ಎಷ್ಟೋ ಜನರು ಬೇಗನೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ತಮ್ಮ ಒಂದೆರಡು ಸಮಯದ ಊಟವನ್ನು ಸಹ ತ್ಯಜಿಸುತ್ತಾರೆ. ಆದರೆ ಹೀಗೆ ಊಟ (Dinner) ಬಿಡುವುದು ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ದೇಹದ ತೂಕವನ್ನು (Body Weight) ಕಡಿಮೆ ಮಾಡುತ್ತದೆ ಎಂಬುದು ಮಾತ್ರ ತುಂಬಾನೇ ಗೊಂದಲದ ವಿಷಯವಾಗಿರುತ್ತದೆ.

ಜಾಹೀರಾತು

ಊಟ ಬಿಡುವುದು ದೇಹದ ತೂಕವನ್ನು ಕಡಿಮೆ ಮಾಡುತ್ತದೆಯೇ**?**

ಆದರೆ, ಅನೇಕ ಜನ ವೈದ್ಯರ ಪ್ರಕಾರ ಹೀಗೆ ಊಟವನ್ನು ತ್ಯಜಿಸುವುದು ಮತ್ತು ಕಡಿಮೆ ಮಾಡುವುದು ದೇಹದ ತೂಕವನ್ನು ಕಡಿಮೆ ಮಾಡುವುದಿಲ್ಲ. ಪೌಷ್ಟಿಕ ತಜ್ಞರಾದ ಅಂಜಲಿ ಮುಖರ್ಜಿ ಅವರ ಪ್ರಕಾರ, ದಿನವಿಡೀ ಒಮ್ಮೆಲೇ ಜಾಸ್ತಿ ಊಟ ಮಾಡುವುದಕ್ಕಿಂತ ಆಗಾಗ್ಗೆ ಮತ್ತು ಸಣ್ಣ ಸಣ್ಣ ಪ್ರಮಾಣದ ಊಟವನ್ನು ತಿನ್ನುವುದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

“ಪ್ರತಿ ಊಟಕ್ಕೆ ನೀವು ತಿನ್ನುವ ಆಹಾರದ ಪ್ರಮಾಣವು ತುಂಬಾ ದೊಡ್ಡದಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ತುಂಬಾನೇ ಸಹಾಯಕ್ಕೆ ಬರುತ್ತದೆ” ಎಂದು ವ್ಯಾಖ್ಯಾನಿಸಲಾಗಿದೆ.

ಒಮ್ಮೆಲೇ ಜಾಸ್ತಿ ಊಟ ಮಾಡುವುದಕ್ಕಿಂತ ಮಿನಿ ಮೀಲ್ಸ್ ತಿನ್ನುವುದು ಒಳ್ಳೆಯದಂತೆ..

ಅಂಜಲಿ ಅವರ ಪ್ರಕಾರ, ದಿನವಿಡೀ ಅನೇಕ ಬಾರಿ ಮಿನಿ ಮೀಲ್ಸ್ ಸೇವಿಸುವುದು ಚಯಾಪಚಯವನ್ನು ನಿಧಾನಗೊಳಿಸುವುದನ್ನು ತಡೆಯುತ್ತದೆ, ಹಸಿವಿನ ನೋವನ್ನು ಸಹ ಕಡಿಮೆ ಮಾಡುತ್ತದೆ.

ಅಲ್ಲದೆ ಇದು ನಿಮ್ಮ ದೇಹವನ್ನು ಬಲಗೊಳಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮತ್ತು ಇನ್ಸುಲಿನ್ ಮಟ್ಟಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಇದನ್ನೂ ಓದಿ:
ಇದ್ದಕಿದ್ದ ಹಾಗೇ ಕಣ್ಣಿನ ರೆಪ್ಪೆಗಳು ಬಡಿದುಕೊಳ್ತಿದ್ಯಾ? ಯಾವ ಅದೃಷ್ಟನೂ ಇಲ್ಲ, ಈ ಸಮಸ್ಯೆಯ ಮುನ್ಸೂಚನೆ ಅದು!

ಜಾಹೀರಾತು

ಭಾಗ ನಿಯಂತ್ರಣದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತ, ಅಂಜಲಿ ಅವರು “ಪೌಷ್ಠಿಕಾಂಶದ ಜಗತ್ತಿನಲ್ಲಿ, ತೂಕ ಮತ್ತು ಕೊಬ್ಬನ್ನು ಕಳೆದುಕೊಳ್ಳಲು ನೀವು ಸೇವಿಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ನೀವು ಸುಡಬೇಕು ಎಂಬುದು. ಹೀಗೆ ಮಿನಿ ಮೀಲ್ಸ್ ಗಳಿಂದಾಗಿ ನೀವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು” ಎನ್ನುತ್ತಾರೆ.

“ಹೀಗೆ ಎಷ್ಟು ಊಟ ಮಾಡುತ್ತೇವೆ ಎಂಬುದು ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ. ಆದ್ದರಿಂದ, ತೂಕವನ್ನು ನಿಯಂತ್ರಿಸಲು ಮಿನಿ ಮೀಲ್ಸ್ ನಲ್ಲಿ ಎಷ್ಟು ತಿನ್ನುತ್ತೇವೆ ಮತ್ತು ನಿಯಂತ್ರಿಸುವುದು ಬಹಳ ನಿರ್ಣಾಯಕವಾಗಿದೆ” ಎಂದು ಪೌಷ್ಟಿಕ ತಜ್ಞ ಡಾ ಗರಿಮಾ ಗೋಯಲ್ ಹೇಳುತ್ತಾರೆ.

ಜಾಹೀರಾತು

ಕೆಲವು ಸುಲಭವಾದ ಮಿನಿ ಮೀಲ್ಸ್ ಆಯ್ಕೆಗಳು ಇಲ್ಲಿವೆ ನೋಡಿ..

– ಬಾದಾಮಿಯೊಂದಿಗೆ 1 ಕಪ್ ಸೋಯಾ ಹಾಲು.

– ಈ ಕೆಳಗಿನ ಯಾವುದಾದರೂ ಫಿಲ್ಲಿಂಗ್‌ಗಳೊಂದಿಗೆ 1 ಸ್ಲೈಸ್ ಹೋಲ್ ವೀಟ್ ಬ್ರೆಡ್‌ನಿಂದ ಮಾಡಿದ ಅರ್ಧ ಸ್ಯಾಂಡ್‌ವಿಚ್ ಮತ್ತು ಇದರ ಜೊತೆಗೆ ಚೂರುಚೂರು ಚಿಕನ್, ಸೌತೆಕಾಯಿ, ಟೊಮೆಟೊ ಚಟ್ನಿ ಅಥವಾ ಪನೀರ್ ಸಹ ಸೇವಿಸಬಹುದು.

– ಸಲಾಡ್‌ನೊಂದಿಗೆ ಮೂಂಗ್ ಮೊಗ್ಗುಗಳ 1 ಬೌಲ್ ಸೇವಿಸಿ.

– 1:1 ಅನುಪಾತದಲ್ಲಿ ಚನಾದೊಂದಿಗೆ ಒಂದು ಹಿಡಿ ಕಡಲೆಕಾಯಿ ಸೇವಿಸಿ.

– ನಿಮ್ಮ ರೊಟ್ಟಿಗಳನ್ನು ಗೋಧಿ ಹೊಟ್ಟು ರೊಟ್ಟಿಗಳೊಂದಿಗೆ ಬದಲಿಸಿ ಮತ್ತು ರೊಟ್ಟಿಗಳ ಸಂಖ್ಯೆಯನ್ನು ನಿಮ್ಮ ನಿಯಮಿತ ಸೇವನೆಯ ಅರ್ಧದಷ್ಟು ಕಡಿಮೆ ಮಾಡಿ.

ಜಾಹೀರಾತು
ಬಾಟಲ್ ಗ್ರೀನ್ ಸೀರೆಯಲ್ಲಿ ಚುಟು ಚುಟು ಬ್ಯೂಟಿಯ ಫೋಟೋಸ್!


ಬಾಟಲ್ ಗ್ರೀನ್ ಸೀರೆಯಲ್ಲಿ ಚುಟು ಚುಟು ಬ್ಯೂಟಿಯ ಫೋಟೋಸ್!

– 1 ಟೋಸ್ಟ್ ಜೊತೆಗೆ 2 ಮೊಟ್ಟೆಯ ಬಿಳಿ ಆಮ್ಲೆಟ್ ಅಥವಾ ಒಂದು ಪೂರ್ಣ ಮೊಟ್ಟೆ ಆಮ್ಲೆಟ್ ಸೇವಿಸಿ.

– ಒಂದು ಸೇಬು, ಕಿತ್ತಳೆ, 20 ಚೆರ್ರಿಗಳು ಅಥವಾ 1 ಬೌಲ್ ಕಲ್ಲಂಗಡಿ ತಿನ್ನಿ.

– ಸಲಾಡ್ ಜೊತೆಗೆ ಒಂದು ಬೌಲ್ ದಾಲ್ ಅಥವಾ ಮೊಸರು ಸೇವಿಸಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Share with Friends
author avatar
News Desk