LatestTop Storiesಜಿಲ್ಲಾ ಸುದ್ದಿಗಳು | District Newsತುಮಕೂರು-Tumakuru

ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ – ವೇದಮೂರ್ತಿ ವಿರುದ್ಧ ಕಠಿಣ ಕ್ರಮಕ್ಕೆ ದಲಿತ ಸೇನೆ ಆಗ್ರಹ

ತುಮಕೂರು: ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ವೇದಮೂರ್ತಿ ವಿರುದ್ಧ ಕಠಿಣ ಕ್ರಮಕ್ಕೆ ದಲಿತ ಸೇನೆ ಆಗ್ರಹ ಮಾಡಿದೆ.ಗಡಿಪಾರು ಜೊತೆಗೆ ಮರಣದಂಡನೆ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು.

ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಬುದ್ಧ, ಬಸವಣ್ಣ, ದಲಿತರ ಬಗ್ಗೆ ನಿಂದನೆ ಮಾಡಿದ ಆರೋಪಿ ವೇದಮೂರ್ತಿಗೆ ಕಠಿಣ ಶಿಕ್ಷೆ ನೀಡಿ ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.ದಲಿತ ಸೇನೆ ರಾಮ್ ವಿಲಾಸ್ ಗುಬ್ಬಿ ತಾಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿದ ದಲಿತ ಸೇನಾ ತಾಲೂಕು ಘಟಕದ ಸದಸ್ಯರು, ವೇದಮೂರ್ತಿ ವಿರುದ್ಧ ಘೋಷಣೆ ಕೂಗಿ ಆರೋಪಿಗೆ ಕಠಿಣ ಶಿಕ್ಷೆ ಜೊತೆಗೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ವೇದಮೂರ್ತಿ ವಿರುದ್ಧ ಕಠಿಣ ಕ್ರಮಕ್ಕೆ ದಲಿತ ಸೇನೆ ಆಗ್ರಹ

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಅವನು ಮಾಡಿರೋ ತಪ್ಪು ಎಂತದ್ದು ಅಂದ್ರೆ ಸಹಿಸುವುದಕ್ಕೆ ಆಗುವುದಿಲ್ಲ. ಯಾಕಂದ್ರೆ ನಮ್ಮ ಅಪ್ಪಾಜಿ ಕೊಟ್ಟಿರೋ ಕಾನೂನು ನಮ್ಮನ್ನ ತಡೆ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಹೇಳ್ತಾ ಇದೀನಿ ನಮ್ಮ ಸರ್ಕಾರದ ಗೃಹಮಂತ್ರಿಗಳು ಇರಬಹುದು, ಇವರ ಉಪ ಮುಖ್ಯಮಂತ್ರಿಗಳು ಇರಬಹುದು ಅವರು ಒಬ್ಬ ದಲಿತರು. ಈ ವಿಚಾರವಾಗಿ ಎಲ್ಲೂ ಮಾತಾಡಿಲ್ಲ, ದಲಿತರಿಗೆ ಅನ್ಯಾಯ ಆಗ್ತಾ ಇದೆ.

ದಲಿತರ ಬಗ್ಗೆ ಕಾಳಜಿ ಇಲ್ಲದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ, ಡಾಕ್ಟರ್ ಜಿ ಪರಮೇಶ್ವರ್ ಎಂದು ಆರೋಪಿಸಿದರು.ದಲಿತ ವಿರೋಧಿ ವೇದಮೂರ್ತಿ ಈ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನು ಈ ವೇಳೆ ಮಾತನಾಡಿದ ಕರ್ನಾಟಕ ದಲಿತ ಸೇವಾ ಸಮಿತಿ ರಾಜ್ಯಾಧ್ಯಕ್ಷ ಹಬ್ಬತನಹಳ್ಳಿ ಶ್ರೀನಿವಾಸ್, ಅವಿವೇಕಿ ವೇದಮೂರ್ತಿ ಮಾತು ಕುಮ್ಮಕ್ಕಿನ ಹೇಳಿಕೆ. ಇತನಿಗೆ ಮರಣದಂಡನೆ ವಿಧಿಸಬೇಕು, ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಬೇಕು. ಉಪಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆತನಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಅಯೋಗ್ಯ ಈ ವೇದಮೂರ್ತಿಯ ಗಡಿಪಾರು ಜೊತೆಗೆ ಇವನಿಗೆ ಮರಣದಂಡನೆ ಕೊಡಬೇಕು. ಈ ಜಿಲ್ಲೆಯವರೇ ಗೃಹ ಮಂತ್ರಿಗಳು ಇದ್ದಾರೆ, ಅವರು ಇದನ್ನು ಗಮನ ಹರಿಸಬೇಕು. ದಲಿತರಿಗೆ ನೋವಾಗಿದೆ, ಸುಖಸಮ್ಮನೆ ಮಾಧ್ಯಮದ ಮುಂದೆ ಮಾತಾಡಿದರೆ ಪ್ರಯೋಜನವಿಲ್ಲ.

ಡಾಕ್ಟರ್ ಜಿ ಪರಮೇಶ್ವರ್ ಅವರೇ ಏನ್ ಮಾಡ್ತಾ ಇದ್ದೀರಾ, ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ಸಿಗಬೇಕು ಅಂದ್ರೆ ಈ ದಲಿತ ಜನಾಂಗ ಬೇಕೇ ಬೇಕು, ಅವನಿಗೆ ಮರಣದಂಡನೆ ಕೊಡಿ ಎಂದು ಆಗ್ರಹಿಸಿದರು.

ಪ್ರತಿಭಟನೆ ಬಳಿಕ ತಹಶೀಲ್ದಾರ್ ಬಿ. ಆರತಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ದಲಿತ ಸೇನೆ ರಾಮ್ ವಿಲಾಸ್ ಸಂಘಟನೆ ತಾಲೂಕು ಅಧ್ಯಕ್ಷ ಶಿವರಾಜು, ಮುಖಂಡ ಲಲಿತಾ ಬಸವರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Share with Friends
author avatar
Digital Desk