Crime NewsLatest

ವಾಲ್ಮೀಕಿ ನಿಗಮದಲ್ಲಿ ಹಗರಣ –ಅಕ್ರಮವಾಗಿ ಬ್ಯಾಂಕ್‌ಗೆ ವರ್ಗಾವಣೆಯಾಗಿದ್ದ 45 ಕೋಟಿ ಸೀಝ್‌

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ (Karnataka Maharshi Valmiki Scheduled Tribe Development Corporation Ltd) ಅಕ್ರಮವಾಗಿ ಸಹಕಾರಿ ಬ್ಯಾಂಕ್‌ಗೆ ವರ್ಗಾವಣೆಯಾಗಿದ್ದ 45 ಕೋಟಿ ರೂ. ಹಣವನ್ನು ವಿಶೇಷ ತನಿಖಾ ತಂಡ (SIT) ಸೀಝ್‌ ಮಾಡಿದೆ.

ಹೈದರಾಬಾದ್‌ನಲ್ಲಿರುವ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕಿಗೆ ನಿಗಮದಿಂದ ಒಟ್ಟು 94.73 ಕೋಟಿ ರೂ. ವರ್ಗಾವಣೆಯಾಗಿತ್ತು. ಈಗಾಗಲೇ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ ಮಾಲೀಕ ಸತ್ಯನಾರಾಯಣ್‌ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ದೆಹಲಿ ಏರ್​ಪೋರ್ಟ್​ನಲ್ಲಿ ಚಂದ್ರಬಾಬು ನಾಯ್ಡು, ಸ್ಟಾಲಿನ್ ಭೇಟಿ

https://youtu.be/EN_1kRxjo-4?si=dbsQwddw_UVzzkKI

ಸಹಕಾರಿ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ 94.73 ಕೋಟಿ ರೂ ಪೈಕಿ ಬಹುಪಾಲು ಹಣ ಡ್ರಾ ಮಾಡಲಾಗಿದೆ. ಉಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಸ್‌ಐಟಿ ತನಿಖೆ ಮುಂದುವರಿಸಿದೆ. ಇದನ್ನೂ ಓದಿ: ಡಿಎಂಕೆ ಕಾರ್ಯಕರ್ತರಿಂದ ಅಣ್ಣಾಮಲೈ ಫೋಟೋ ಹಾಕಿ ನಡು ರಸ್ತೆಯಲ್ಲಿ ಮೇಕೆ ತಲೆ ಕತ್ತರಿಸಿ ಸಂಭ್ರಮಾಚರಣೆ

https://youtu.be/IrlpjBl1yQk?si=NUmyje_U5gGglwRg

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪದ್ಮನಾಭ, ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗೇಶ್ವರ ರಾವ್, ಸತ್ಯನಾರಾಯಣ ಬಂಧನ ಮಾಡಿದ ಎಸ್‌ಐಟಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಮಾಜಿ ಸಿಎಂ ಬಿಎಸ್‌ವೈ ಆಪ್ತ ಕಾಪು ಸಿದ್ದಲಿಂಗಸ್ವಾಮಿ ನಿಧನ

https://youtu.be/bJ8aWd95gqc?si=gGMYMbvTax8B9RHd
Share with Friends
author avatar
News Desk