Latestರಾಷ್ಟ್ರೀಯ-National

ಪೋರ್ಶೆ ಕಾರು ಅಪಘಾತ ಪ್ರಕರಣ-ಆರೋಪಿ ಅಪ್ರಾಪ್ತನ ತಾಯಿ ಬಂಧನ

ಮುಂಬೈ: ಪೋರ್ಶೆ ಕಾರು ಡಿಕ್ಕಿ (Porsche Crash Case) ಹೊಡೆದು ಇಬ್ಬರು ಟೆಕ್ಕಿಗಳು ಮೃತಪಟ್ಟ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕಾರು ಚಲಾಯಿಸಿದ್ದ ಆರೋಪಿ ಅಪ್ರಾಪ್ತನ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಅಪಘಾತ ಸಂಭವಿಸಿದಾಗ ಮಗ ಕುಡಿದಿರಲಿಲ್ಲ ಎಂದು ಸಾಬೀತುಪಡಿಸಲು ತಾಯಿ ತನ್ನ ರಕ್ತದ ಮಾದರಿಯನ್ನು ಬದಲಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆ ವೇಳೆ ಅಪ್ರಾಪ್ತನ ರಕ್ತದ ಬದಲಿಗೆ ತಾಯಿಯ ರಕ್ತದ ಮಾದರಿಯನ್ನ ಬದಲಾಯಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಪ್ರಜ್ವಲ್‌ಗೆ ಎಸ್‌ಐಟಿ ಅಧಿಕಾರಿಗಳ ಸಾಲು ಸಾಲು ಪ್ರಶ್ನೆ: ಉತ್ತರ ನೀಡದೇ ಅಸಹಕಾರ

ಪ್ರಕರಣವೇನು?
ಮೇ 19 ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಅಪ್ರಾಪ್ತ ಪಾನಮತ್ತರಾಗಿ ಪೋರ್ಶೆ ಕಾರು ಚಲಾಯಿಸಿದ ಕಾರಣ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಅಪ್ರಾಪ್ತನ ಕುಟುಂಬದ ಚಾಲಕನನ್ನು ಅಪಹರಿಸಿ ತಾನೇ ತಪ್ಪು ಒಪ್ಪಿಕೊಳ್ಳುವಂತೆ ಆಮಿಷ ಒಡ್ಡಲಾಗಿತ್ತು. ಈ ಆರೋಪದಲ್ಲಿ ಈಗಾಗಲೇ ಬಾಲಕನ ತಂದೆ ಮತ್ತು ತಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ಬೆಲೆಯಲ್ಲಿ 69.50 ರೂ. ಇಳಿಕೆ

https://youtu.be/r32NMq7j5QU?si=uOrwjLalI3B-hm9m

ಅಪರಾಧವನ್ನು ಮುಚ್ಚಿಡಲು ಪ್ರಭಾವಿ ಕುಟುಂಬ ನಡೆಸಿದ ಪ್ರಯತ್ನಗಳು ತನಿಖೆಯಿಂದ ತಿಳಿದುಬಂದಿದೆ. ಸರ್ಕಾರಿ ಸ್ವಾಮ್ಯದ ಸಸೂನ್ ಆಸ್ಪತ್ರೆಯಲ್ಲಿ ಅಪ್ರಾಪ್ತನ ವೈದ್ಯಕೀಯ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿವೆ. ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ: ಶಾಮನೂರು ಶಿವಶಂಕರಪ್ಪ

https://youtu.be/Xmp5YfB-Rt4?si=VYxgwp8UDali1o2T
Share with Friends
author avatar
News Desk